ರವಿಚಂದ್ರನ್ ಅಶ್ವಿನ್ ವಿಚಿತ್ರ ಬೌಲಿಂಗ್ ಇದೀಗ ಸಾಕಷ್ಟು ಸಂಚಲನ ಮೂಡಿಸುತ್ತಿದೆ. ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಶ್ವಿನ್ ಮಾಡಿದ ವಿಚಿತ್ರ ಬೌಲಿಂಗ್ ಶೈಲಿಯನ್ನು ನೀವೂ ಒಮ್ಮೆ ನೋಡಿಬಿಡಿ..

ಚೆನ್ನೈ(ಜು.24): ಭಾರತ ಟೆಸ್ಟ್‌ ತಂಡದ ಅನುಭವಿ ಆಫ್‌ ಸ್ಪಿನ್ನರ್‌ ಆರ್‌. ಅಶ್ವಿನ್‌, ತಮ್ಮ ಬೌಲಿಂಗ್‌ ಶೈಲಿಯನ್ನು ಆಗಿಂದಾಗ್ಗೆ ಬದಲಾವಣೆ ಮಾಡಿಕೊಂಡು ಗಮನಸೆಳೆಯುತ್ತಿರುತ್ತಾರೆ. 

Add Asianetnews Kannada as a Preferred SourcegooglePreferred

ಜಿಂಬಾಬ್ವೆ BAN: ಅಚ್ಚರಿಗೊಳಗಾದ ಅಶ್ವಿನ್..!

ಕೆಲ ದಿನಗಳ ಹಿಂದಷ್ಟೇ ತಮಿಳುನಾಡು ಪ್ರೀಮಿಯರ್‌ ಲೀಗ್‌ನಲ್ಲಿ ಅಶ್ವಿನ್‌ ವಿಚಿತ್ರ ಬೌಲಿಂಗ್‌ ಶೈಲಿಯಿಂದ ಸುದ್ದಿ ಯಾಗಿದ್ದರು. ಇದೀಗ ಅದೇ ಬೌಲಿಂಗ್‌ ಶೈಲಿ ಮೂಲಕ ವಿಕೆಟ್‌ ಪಡೆದಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಹೀಗಿದೆ ನೋಡಿ ಅಶ್ವಿನ್ ವಿಚಿತ್ರ ಶೈಲಿಯ ಬೌಲಿಂಗ್:

ಬೌಲಿಂಗ್‌ ಶೈಲಿಯನ್ನು ಸಂಪೂರ್ಣವಾಗಿ ಪೂರೈಸದೆ ಚೆಂಡನ್ನು ಬೆನ್ನ ಹಿಂದೆ ಇಟ್ಟುಕೊಂಡು ಬಂದು ಎಸೆಯುವ ಹೊಸದೊಂದು ಶೈಲಿಯ ವಿಧಾನವನ್ನು ಅಶ್ವಿನ್‌ ಕಂಡುಕೊಂಡಿದ್ದಾರೆ. ಅಶ್ವಿನ್‌ ಬಲಗಾಲನ್ನು ಮುಂದಿಟ್ಟು ಚೆಂಡನ್ನು ಎಸೆಯುವುದರಿಂದ ನೋಡುಗರಿಗೆ ಇದೊಂದು ವಿಚಿತ್ರ ಶೈಲಿ ಎನಿಸುತ್ತಿದೆ.