ಜಿಂಬಾಬ್ವೆ BAN: ಅಚ್ಚರಿಗೊಳಗಾದ ಅಶ್ವಿನ್..!

ಜಾಗತಿಕ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಐಸಿಸಿ ಜಿಂಬಾಬ್ವೆ ತಂಡವನ್ನು ದಿಢೀರ್ ಆಗಿ ನಿಷೇಧಿಸಿದೆ. ಇದರ ಬೆನ್ನಲ್ಲೇ ಜಿಂಬಾಬ್ವೆ ಕ್ರಿಕೆಟಿಗರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.ಇದರ ಬೆನ್ನಲ್ಲೇ ಟೀಂ ಇಂಡಿಯಾ ಕ್ರಿಕೆಟಿಗ ಆರ್. ಅಶ್ವಿನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Team India Cricketer R Ashwin sympathises with agony of Zimbabwe cricketers after ICC suspension

ಹರಾರೆ[ಜು.20]: ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಜಿಂಬಾಬ್ವೆ ಕ್ರಿಕೆಟ್ ಮಂಡಳಿಯನ್ನು ಅಮಾನತು ಮಾಡಿರುವುದಕ್ಕೆ ಭಾರತ ಕ್ರಿಕೆಟ್ ತಂಡದ ಆಟಗಾರ ರವಿಚಂದ್ರನ್ ಅಶ್ವಿನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಜಿಂಬಾಬ್ವೆ ಆಟಗಾರರ ಮೇಲೆ ಮಾತ್ರವಲ್ಲ, ಕ್ರಿಕೆಟ್‌ನ ಪ್ರಭಾವಿ ತಂಡ ಭಾರತದ ಮೇಲೂ ಪರಿಣಾಮ ಬೀರಲಿದೆ ಎಂದು ಅಶ್ವಿನ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಜಾಗತಿಕ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜಿಂಬಾಬ್ವೆ ಕ್ರಿಕೆಟ್ ಸಂಸ್ಥೆಯನ್ನು ಐಸಿಸಿ ಅಂ.ರಾ. ಕ್ರಿಕೆಟ್‌ನಿಂದಲೇ ಗುರುವಾರ ಅಮಾನತು ಮಾಡಿತ್ತು. ಐಸಿಸಿ ಪೂರ್ಣ ಸದಸ್ಯ ಜಿಂಬಾಬ್ವೆ ಕ್ರಿಕೆಟ್ ಮಂಡಳಿ, ಐಸಿಸಿ ಸಂವಿಧಾನದ ವಿಧಿ 2.4 (ಸಿ) ಮತ್ತು (ಡಿ) ಉಲ್ಲಂಘನೆ ಮಾಡಿದೆ ಎಂದು ಐಸಿಸಿ ಮಂಡಳಿ ಸರ್ವಾನುಮತದಿಂದ ತೀರ್ಮಾನಿಸಿದೆ. 

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಜಿಂಬಾಬ್ವೆ BAN..!

ಈ ಅಮಾನತಿನಿಂದಾಗಿ ಜಿಂಬಾಬ್ವೆ ಕ್ರಿಕೆಟ್ ತಂಡ, ಐಸಿಸಿ ಮಾನ್ಯತೆಯ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್, ಇದು ತುರ್ತು ಕ್ರಮವಲ್ಲ. ಸಾಕಷ್ಟು ಯೋಚಿಸಿಯೇ ಈ ನಿರ್ಣಯ ಕೈಗೊಳ್ಳಲಾಗಿದೆ. ಕ್ರಿಕೆಟ್ ಒಂದು ಸುಂದರ ಕ್ರೀಡೆ ಅದು ಯಾವಾಗಲೂ ರಾಜಕೀಯದಿಂದ ಮುಕ್ತವಾಗಿರಬೇಕು. ಈ ಅಮಾನತಿನಿಂದಾಗಿ ಜಿಂಬಾಬ್ವೆ ಕ್ರಿಕೆಟ್ ಮಂಡಳಿಗೆ ಐಸಿಸಿ ನೀಡುತ್ತಿದ್ದ ಹಣವನ್ನು ಸ್ಥಗಿತಗೊಳಿಸಲಾಗುವುದು ಎಂದಿದ್ದಾರೆ. ಐಸಿಸಿಯ ಈ ಕಠಿಣ ನಿರ್ಧಾರದಿಂದಾಗಿ ಜಿಂಬಾಬ್ವೆ ಕ್ರಿಕೆಟಿಗ ಸಿಕಂದರ್ ರಾಜಾ ಸೇರಿದಂತೆ ಹಲವಾರು ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದು ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.

Latest Videos
Follow Us:
Download App:
  • android
  • ios