ಅಮ್ರೋ(ಏ.29): ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನ್ ಜಹಾನ್ ವಿವಾದ ಇದೀಗ ತಾರಕಕ್ಕೇರಿದೆ. ಶಮಿ ವಿರುದ್ಧ ಮಾನಸಿಕ ಹಿಂಸೆ, ಕಿರುಕುಳ ಹಾಗೂ ಬೇರೊಬ್ಬಳ ಜೊತೆ ಗೌಪ್ಯ ಮದೆವೆ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಪತ್ನಿ ಹಸೀನ್ ಜಹಾನ್ ಇದೀಗ ಉತ್ತರ ಪ್ರದೇಶ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. 

ಇದನ್ನೂ ಓದಿ: ರಾಜಕೀಯಕ್ಕೆ ಧುಮುಕಿದ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ!

ಶಮಿ ವಿರುದ್ಧ ಆರೋಪದ ಸುರಿಮಳೆಗೈದು  ಪುತ್ರಿಯೊಂದಿಗೆ ತಾಯಿ ಮನೆಯಲ್ಲಿ ವಾಸವಿದ್ದ  ಹಸೀನ್ ಜಹಾನ್, ಕಾನೂನು ಹೋರಾಟ ಮುಂದುವರಿಸಿದ್ದರು. ಆದರೆ ಭಾನುವಾರ ಸಂಜೆ ದಿಢೀರ್ ಆಗಿ ಉತ್ತರ ಪ್ರದೇಶದ ಅಮೋ ಬಳಿ ಇರುವ ಶಮಿ ಮನೆಗೆ ಬಂದ ಹಸೀನ್ ಜಹಾನ್ ಹೈಡ್ರಾಮ ಸೃಷ್ಟಿಸಿದ್ದಾರೆ. ಮನೆ ಎದುರು ಪ್ರತ್ಯಕ್ಷರಾದ ಹಸೀನ್ ಜಹಾನ್ ಮನೆ ಪ್ರವೇಶಿಸದಂತೆ ಶಮಿ ಪೋಷಕರು ಸೂಚಿಸಿದ್ದಾರೆ. ತಕ್ಷಣವೇ ಮನೆಯಿಂದ ಹೊರಡುವಂತೆ ಹೇಳಿದ್ದಾರೆ. 

ಇದನ್ನೂ ಓದಿ: ಪ್ರತಿ ತಿಂಗಳು 10 ಲಕ್ಷ ಬೇಡಿಕೆಯಿಟ್ಟ ಶಮಿ ಪತ್ನಿ

ಶಮಿ ಪೋಷಕರ ಮಾತಿಗೆ ಕಿವಿಗೊಡದ ಹಸೀನ್ ಜಹಾನ್, ಪುತ್ರಿಯೊಂದಿಗೆ ಮನೆಯೊಳಗಿನ ಕೊಠಡಿ ಸೇರಿಕೊಂಡು ಬಾಗಿಲು ಹಾಕಿದ್ದಾರೆ. ಬೇರೆ ದಾರಿ ಕಾಣದ ಶಮಿ ಪೋಷಕರು ಪೊಲೀಸರಿಗೆ ಫೋನ್ ಮೂಲಕ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಸೀನ್ ಜಹಾನ್ ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಬಿಸಿಸಿಐ ವಿರುದ್ಧ ಮೊಹಮ್ಮದ್ ಶಮಿ ಪತ್ನಿ ಗರಂ ಆಗಿದ್ದೇಕೆ?

ಠಾಣೆಯಿಂದ ಹೊರಬಂದ ಹಸೀನ್ ಜಹಾನ್ ಪೊಲೀಸರ ವಿರುದ್ಧವೂ ಆರೋಪ ಮಾಡಿದ್ದಾರೆ. ನನ್ನ ಪತಿಯ ಮನೆಯಲ್ಲಿ ಇರುವ ಅವಕಾಶ ನನಗಿದೆ. ಪೋಷಕರನ್ನು ಅರೆಸ್ಟ್ ಮಾಡುವ ಬದಲು ನನ್ನನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಶಮಿ ಪೋಷಕರು ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದಿದ್ದಾರೆ.