ಬಿಸಿಸಿಐ ವಿರುದ್ಧ ಮೊಹಮ್ಮದ್ ಶಮಿ ಪತ್ನಿ ಗರಂ ಆಗಿದ್ದೇಕೆ?

First Published 15, Jul 2018, 7:55 PM IST
Hasin Jahan slams BCCI for clearing Mohammed Shami off allegations
Highlights

 ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಪತ್ನಿ ಹಸೀನ್ ಜಹಾನ್ ಇದೀಗ ಬಿಸಿಸಿಐ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಶಮಿ ಪತ್ನಿ ಬಿಸಿಸಿಐ ವಿರುದ್ಧ ಕೋಪಗೊಂಡಿದ್ದೇಕೆ? ಇಲ್ಲಿದೆ ವಿವರ.

ಕೋಲ್ಕತ್ತಾ(ಜು.15): ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸಿನ್ ಜಹಾನ್ ನಡುವಿನ ಜಗಳ ಮುಗಿಯೋ ಲಕ್ಷಣ ಕಾಣುತ್ತಿಲ್ಲ. ಶಮಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಹಸಿನ್ ಜಹಾನ್ ಇದೀಗ ಬಿಸಿಸಿಐ ವಿರುದ್ಧ ಗರಂ ಆಗಿದ್ದಾರೆ.

ಮೊಹಮ್ಮದ್ ಶಮಿ ವಿರುದ್ಧ ಗಂಭೀರ ಆರೋಪವಿದ್ದರೂ, ಬಿಸಿಸಿಐ ಶಮಿಗೆ ಕ್ರಿಕೆಟ್ ಆಡಲು ಅನುಮತಿ ನೀಡಿದೆ. ಇಷ್ಟೇ ಅಲ್ಲ ಶಮಿ ಮೇಲಿನ ಆರೋಪಗಳಿಂದ ಖುಲಾಸೆಗೊಳಿಸಿರೋದಕ್ಕೆ ಪತ್ನಿ ಹಸಿನ್ ತಿರುಗೇಟು ನೀಡಿದ್ದಾರೆ.

ಇದನ್ನು ಓದಿ:ಕ್ರಿಕೆಟಿಗ ಶಮಿ ಜೊತೆಗಿನ ಕಿತ್ತಾಟದ ಬಳಿಕ ಪತ್ನಿ ಹಸಿನ್ ಈಗ ಏನು ಮಾಡುತ್ತಿದ್ದಾರೆ ?

ಶಮಿ ಬೇರೆ ಯುವತಿಯೊಂದಿಗೆ ರಹಸ್ಯ ಮದುವೆಯಾಗಿರೋದಾಗಿ ಪತ್ನಿ ಹಸೀನ್ ಆರೋಪಿಸಿದ್ದರು. ಈ ಘಟನೆ ಬಳಿಕ ಶಮಿ ವಿಚ್ಚೇಧನ ಬಯಸಿದ್ದರು. ಇಷ್ಟಾದ್ದರೂ ಬಿಸಿಸಿಐ  ಶಮಿ ಮೇಲಿನ ಆರೋಪಗಳನ್ನ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹಸಿನಾ ಜಹಾನ್, ಮುಂಬೈ ಮಿರರ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನು ಓದಿ: ಬಾಲಿವುಡ್‌ಗೆ ಪದಾರ್ಪಣೆ ಮಾಡ್ತಾರ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸಿನ್ ?

loader