ಪ್ರತಿ ತಿಂಗಳು 10 ಲಕ್ಷ ಬೇಡಿಕೆಯಿಟ್ಟ ಶಮಿ ಪತ್ನಿ

First Published 11, Apr 2018, 11:01 PM IST
Hasin Jahan demands Rs 10 lakh a month as maintenance from Mohammad Shami
Highlights

ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಬಗ್ಗೆ 15 ದಿನಗಳೊಳಗಾಗಿ ಉತ್ತರಿಸುವಂತೆ ಸೂಚಿಸಿದೆ.

ಕೋಲ್ಕತಾ(ಏ.11): ತಾನು ಹಾಗೂ ತನ್ನ ಮಗಳ ಜೀವನ ನಿರ್ವಹಣೆಗೆ ಶಮಿ ತಮಗೆ ಪ್ರತಿ ತಿಂಗಳು 10 ಲಕ್ಷ ರುಪಾಯಿ ನೀಡಬೇಕೆಂದು ಕೋರಿ ಶಮಿ ಪತ್ನಿ ಹಸೀನಾ ಜಹಾನ್ ಆಲಿಪುರ್ ಕೋರ್ಟ್ ಮೆಟ್ಟಿಲೇರಿದ್ದಾರೆ.

ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಬಗ್ಗೆ 15 ದಿನಗಳೊಳಗಾಗಿ ಉತ್ತರಿಸುವಂತೆ ಸೂಚಿಸಿದೆ.

ಶಮಿ ವರ್ಷಕ್ಕೆ ಸುಮಾರು 100 ಕೋಟಿ ಆದಾಯ ಗಳಿಸುತ್ತಾರೆ. ಹೀಗಾಗಿ ಈ ಪ್ರಮಾಣದ ಪರಿಹಾರ ನೀಡುವುದ ಕಷ್ಟವಾಗುವುದಿಲ್ಲ ಎಂದು ಜಹಾನ್ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ. ಹೆಂಡತಿ ಹಾಗೂ ಮಗಳನ್ನು ಸಾಕುವುದು ಪತಿಯ ಕರ್ತವ್ಯವಾಗಿದ್ದು, ಹಸೀನಾಳಿಗೆ 7 ಲಕ್ಷ, ಹಾಗೂ 3 ಲಕ್ಷ ನೀಡಬೇಕೆಂದು ಕೋರ್ಟ್'ನಲ್ಲಿ ವಾದಿಸಿದ್ದಾರೆ.

 

loader