ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸಿನ್ ಜಹಾನ್ ಹೋರಾಟಕ್ಕೆ ಇದೀಗ ರಾಜಕೀಯ ಶಕ್ತಿಯೂ ಸೇರ್ಪಡೆಗೊಂಡಿದೆ. ಇಷ್ಟು ದಿನ ಏಕಾಂಗಿ ಹೋರಾಟ ನಡೆಸುತ್ತಿದ್ದ ಹಸಿನ್ ಇದೀಗ ಕಾಂಗ್ರೆಸ್ ಪಕ್ಷ ಸೇರಿಕೊಂಡು ಕಾನೂನು ಹೋರಾಟಕ್ಕೆ ಮುಂಜಾಗಿದ್ದಾರೆ. 

ಮುಂಬೈ(ಅ.17): ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ಕಾನೂನು ಹೋರಾಟ ಮಾಡುತ್ತಿರುವ ಪತ್ನಿ ಹಸಿನ್ ಜಹಾನ್ ಇದೀಗ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ಮುಂಬೈನ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ಹಾಗೂ ಇತರ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಹಸಿನ್ ಜಹಾನ್ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. 

Scroll to load tweet…

ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸಿನ್ ಜಹಾನ್ ನಡುವಿನ ಜಗಳ ಶುರುವಾಗಿ ಹಲವು ವರ್ಷಗಳು ಉರುಳಿದೆ. ಶಮಿ ಬೇರೆ ಯುವತಿ ಜೊತೆ ರಹಸ್ಯ ಮದುವೆಯಾಗಿದ್ದಾರೆ ಅನ್ನೋ ಆರೋಪದಿಂದ ಆರಂಭಗೊಂಡ ಜಗಳ ದಿನದಿಂದ ದಿನಕ್ಕೆ ಹೊಸ ಹೊಸ ರೂಪ ಪಡೆದುಕೊಂಡಿತ್ತು. 

ಮಾನಸಿಕ ಹಿಂಸೆ, ದೈಹಿಕ ಹಿಂಸೆ, ವಂಚನೆ ಆರೋಪ ಸೇರಿದಂತೆ ಶಮಿ ವಿರುದ್ಧ ಹಲವು ಪ್ರಕರಣ ದಾಖಲಿಸಿದ ಶಮಿ ಪತ್ನಿ ಹಸಿನ್ ಜಹಾನ್ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ತಮಗೆ ನ್ಯಾಯ ಕೊಡಿಸಿ ಎಂದು ಪಶ್ಚಿಮ ಬಂಗಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನೂ ಬೇಟಿಯಾಗಿದ್ದರು. ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪೆಡೆಯಾಗೋ ಮೂಲಕ ಹಸಿನ್ ಜಹಾನ್ ರಾಜಕೀಯ ಶಕ್ತಿ ಬಳಸಿ ಹೋರಾಟ ನಡೆಸಲು ಮುಂದಾಗಿದ್ದಾರೆ.