ಕೋಲ್ಕ​ತಾ(ಸೆ.10): ಕೌಟುಂಬಿಕ ಹಿಂಸಾಚಾ​ರ ಪ್ರಕ​ರ​ಣ​ದಲ್ಲಿ ಅರೆಸ್ಟ್ ವಾರೆಂಟ್ ಪಡೆದಿದ್ದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಅಮೇರಿಕಾದಲ್ಲಿರುವ ಶಮಿ ಬಂಧನಕ್ಕೆ 2 ತಿಂಗಳು ಬ್ರೇಕ್ ಹಾಕಲಾಗಿದೆ. ಶಮಿ ವಕೀಲರ ಸತತ ಹೋರಾಟದಿಂದ ಇದೀಗ ಅಲಿಪೋರ್ ನ್ಯಾಯಾಲಯ ಶಮಿ ಬಂಧನಕ್ಕೆ 2 ತಿಂಗಳ ತಡೆಯೊಡ್ಡಿದೆ.

ಇದನ್ನೂ ಓದಿ: ವಕೀಲರ ಜೊತೆ ನಿರಂತರ ಸಂಪರ್ಕದಲ್ಲಿ ಶಮಿ; ಸೆ.12ಕ್ಕೆ ತವರಿಗೆ!

ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದ ಮೊಹಮ್ಮದ್ ಶಮಿಗೆ ಅಲಿಪೋರ್ ನ್ಯಾಯಾ​ಲ​ಯವೇ 15 ದಿನ​ದೊ​ಳಗೆ ಶರ​ಣಾ​ಗು​ವಂತೆ ವಿಂಡೀಸ್‌ ಪ್ರವಾ​ಸ​ದ​ಲ್ಲಿದ್ದ ಶಮಿಗೆ ಆದೇ​ಶಿ​ಸಿತ್ತು. ಆದರೆ ಜಿಲ್ಲಾ ನ್ಯಾಯ​ಮೂರ್ತಿ ಜಸ್ಟಿಸ್‌ ರಾಯ್‌ ಚಟ್ಟೋ​ಪ​ಧ್ಯಾಯ್‌ ಶಮಿ ಬಂಧ​ನಕ್ಕೆ ತಡೆ​ಯೊ​ಡ್ಡಿ​ದ್ದು, ನ.2ಕ್ಕೆ ನ್ಯಾಯಾ​ಲಯ ಹೆಚ್ಚು​ವರಿ ವಿಚಾ​ರಣೆ ನಡೆ​ಸ​ಲಿ​ದೆ. 

ಇದನ್ನೂ ಓದಿ: "ಅಸರಾಂ, ರಾಮ್ ರಹೀಮ್‌ರನ್ನೇ ಕಾನೂನು ಬಿಡಲಿಲ್ಲ, ಶಮಿ ಯಾವ ಲೆಕ್ಕ"?

ಶಮಿ ವಿರುದ್ಧ ಪತ್ನಿ ಹಸಿನ್‌ ಜಹಾನ್‌ ಕೌಟುಂಬಿಕ ಹಿಂಸಾಚಾ​ರ ದೂರು ದಾಖ​ಲಿ​ಸಿ​ದ್ದರು. ಕಳೆದೊಂದು ವರ್ಷದಿಂದ ನಿರಂತರ ಹೋರಾಟ ನಡೆಸುತ್ತಿರುವ ಹಸಿನ್ ಜಹಾನ್, ಶಮಿಗೆ ಬಂಧನ ವಾರೆಂಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಅಸರಾಂ ಬಾಪು, ರಾಮ್ ರಹೀಮ್ ಅವರೇ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಶಮಿ ಯಾವ ಲೆಕ್ಕ ಎಂದು ಪ್ರತಿಕ್ರಿಯೆ ನೀಡಿದ್ದರು.