ಕೋಲ್ಕತಾ(ಸೆ.04): ಕೌಟುಂಬಿಕ ಹಿಂಸೆ, ಮಾನಸಿಕ ಕಿರುಕುಳ ಸೇರಿದಂತೆ ಪತ್ನಿಯಿಂದ ಹಲವು ಆರೋಪಗಳನ್ನು ಎದುರಿಸುತ್ತಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಅರೆಸ್ಟ್ ವಾರೆಂಟ್ ನೀಡಲಾಗಿದೆ. ಶಮಿ ಪತ್ನಿ ಹಸೀನ್ ಜಹಾನ್ ದೂರಿನ ಆಧಾರದಲ್ಲಿ ಕೋಲ್ಕತಾ ಕೋರ್ಟ್ ಬಂಧನ ವಾರೆಂಟ್ ನೀಡಿದೆ. ಕೋಲ್ಕತಾ ಕೋರ್ಟ್ ಶಮಿಗೆ ಆರೆಸ್ಟ್ ವಾರೆಂಟ್ ನೀಡಿದ ಬೆನ್ನಲ್ಲೇ ಪತ್ನಿ ಹಸೀನ್ ಜಹಾನ್ ಕಾನೂನು ಹೋರಾಟದಲ್ಲಿ ಮೇಲುಗೈ ಸಾಧಿಸಿದ ಸಂತಸದಲಿದ್ದಾರೆ. ಇಷ್ಟೇ ಅಲ್ಲ ಕಾನೂನಿನ ಮುಂದೆ ಎಲ್ಲರೂ ಸಮ ಎಂದಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಅರೆಸ್ಟ್ ವಾರೆಂಟ್!

ಸತ್ಯವನ್ನು ಮರೆಮಾಚಿ, ಕಾನೂನಿನಿಂದ ತಪ್ಪಿಸಿಕೊಳ್ಳೋ ಮೊಹಮ್ಮದ್  ಶಮಿಗೆ ತಕ್ಕ ಶಾಸ್ತಿಯಾಗಿದೆ. ತಪ್ಪು ಮಾಡಿದ ಅಸಾರಾಂ ಬಾಪು, ರಾಮ್ ರಹೀಮ್‌ರನ್ನೇ ಕಾನೂನು ಬಿಟ್ಟಿಲ್ಲ. ಇನ್ನು ಮೊಹಮ್ಮದ್ ಶಮಿ ಯಾವ ಲೆಕ್ಕ ಎಂದು ಪತ್ನಿ ಹಸೀನ್ ಜಹಾನ್ ಹೇಳಿದ್ದಾರೆ. ಈಗಾಗಲೇ ಶಮಿ ಬಂಧನವಾಗುತ್ತಿತ್ತು. ಆದರೆ ಬಿಸಿಸಿಐ ಹಾಗೂ ಕೆಲ ಪ್ರಮುಖ ಕ್ರಿಕೆಟಿಗರು ಶಮಿಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ವಿಳಂಬವಾಗಿದೆ. ಆದರೆ ಇನ್ನು ಸಾಧ್ಯವಿಲ್ಲ ಎಂದು ಹಸೀನ್ ಜಹಾನ್ ಹೇಳಿದರು.

ಇದನ್ನೂ ಓದಿ: ಶಮಿಗೆ ಅಮೆರಿಕ ವೀಸಾ ನಿರಾಕರಣೆ; ಆಪತ್ತಿನಿಂದ ಪಾರು ಮಾಡಿದ BCCI!

ಶಮಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಸಮಯದಲ್ಲಿ ಸರೆಂಡರ್ ಆಗಿ ಬೇಲ್‌ಗೆ ಮನವಿ ಸಲ್ಲಿಸಲು ಸೂಚಿಸಲಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಮುಗಿಸಿರುವ ಮೊಹಮ್ಮದ್ ಶಮಿ ತವರಿಗೆ ವಾಪಾಸ್ಸಾಗಲಿದ್ದಾರೆ. ಈಗಾಗಲೇ ಶಮಿ ವಕೀಲರ ಜೊತೆ ಚರ್ಚೆ ನಡೆಸಿದ್ದಾರೆ.