ನ್ಯೂಯಾರ್ಕ್(ಸೆ.07): ವೆಸ್ಟ್ ಇಂಡೀಸ್ ಪ್ರವಾಸ ಮುಗಿಸಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಸದ್ಯ ಅಮೇರಿಕದಲ್ಲಿದ್ದಾರೆ. ವಿಂಡೀಸ್ ಪ್ರವಾಸದ ವೇಳೆ ಕೋಲ್ಕತಾ ಕೋರ್ಟ್ ಶಮಿಗೆ ಅರೆಸ್ಟ್ ವಾರೆಂಟ್ ನೀಡಿತ್ತು. ಪತ್ನಿ ಹಸೀನ್ ಜಹಾನ್ ನೀಡಿದ ಕೌಟುಂಬಿ ಹಿಂಸೆ, ದೈಹಿಕ ಹಿಂಸೆ, ಮಾನಸಿಕ ಕಿರುಕುಳ ದೂರಿನ ಅನ್ವಯ ಕೋರ್ಟ್ ವಾರೆಂಟ್ ನೀಡಿದೆ. 15 ದಿನಗಳೊಳಗೆ ಸರೆಂಡರ್ ಆಗಿ ಜಾಮೀನಿಗಾಗಿ ಮನವಿ ಮಾಡಲು ಸೂಚಿಸಿತ್ತು. ಇದೀಗ ಸೆಪ್ಟೆಂಬರ್ 12 ರಂದು ಶಮಿ ತವರಿಗೆ ವಾಪಾಸ್ಸಾಗುತ್ತಿದ್ದಾರೆ ಎಂದು ಬಿಸಿಸಿಐ ಖಚಿತಪಡಿಸಿದೆ. ಇದರ ಬೆನ್ನಲ್ಲೇ ಶಮಿ ಅರೆಸ್ಟ್ ಆಗ್ತಾರ ಅನ್ನೋ ಆತಂಕ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದೆ.

ಇದನ್ನೂ ಓದಿ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಅರೆಸ್ಟ್ ವಾರೆಂಟ್!

ಶಮಿ ವಿರುದ್ದ ಕಾನೂನು ಸಮರ ಸಾರಿರುವ ಪತ್ನಿ ಹಸೀನ್ ಜಹಾನ್, ಶಮಿ ಜೊತೆಗೆ ಕುಟುಂಬ ನಾಲ್ವರ ಮೇಲೂ ಕೇಸ್ ದಾಖಲಿಸಿದ್ದಾರೆ. ಅರೆಸ್ಟ್ ವಾರೆಂಟ್ ಬೆನ್ನಲ್ಲೇ ಶಮಿ ತನ್ನ ವಕೀಲರಾದ ಸಲೀಂ ರಹಮಾನ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕಾನೂನು ಹೋರಾಟದ ಕುರಿತು ಮಾತುಕತೆ ನಡೆಸಿದ್ದಾರೆ. ಶಮಿ ಮುಂದಿರುವ ಕಾನೂನು ಅವಕಾಶಗಳ ಕುರಿತು ಶಮಿ ಚರ್ಚಿಸಿದ್ದಾರೆ.

ಇದನ್ನೂ ಓದಿ: ಶಮಿಗೆ ಅಮೆರಿಕ ವೀಸಾ ನಿರಾಕರಣೆ; ಆಪತ್ತಿನಿಂದ ಪಾರು ಮಾಡಿದ BCCI!

ಇತ್ತ ಬಿಸಿಸಿಐ ಶಮಿ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆಯಾದರೆ, ಈ ಚಾರ್ಜ್‌ಶೀಟ್ ಆಧರಿಸಿ ಕ್ರಮಕೈಗೊಳ್ಳಲಾಗುವುದು. ಆದರೆ ಸದ್ಯ ದೂರು ಹಾಗೂ ಅರೆಸ್ಟ್ ವಾರೆಂಟ್ ಆಧಾರವಾಗಿಟ್ಟುಕೊಂಡು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಹೀಗಾಗಿ ಈಗಲೇ ಯಾವುದನ್ನು ನಿರ್ಧರಿಸುವುದು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಶಮಿ ಒಳಗೊಂಡಿದ್ದಾರ ಅನ್ನೋದು ಮುಖ್ಯ. ಇದು ವಿಚಾರಣೆ ಬಳಿವಕಷ್ಟೇ ತಿಳಿಯಲಿದೆ ಎಂದು ಬಿಸಿಸಿಐ ಹೇಳಿದೆ.