ಟೀಂ ಇಂಡಿಯಾ ಕ್ರಿಕೆಟಿಗನಿಂದ ಅನುಮಾನಾಸ್ಪದ ಬೌಲಿಂಗ್..!
ಬೌಲಿಂಗ್ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ ಪಂದ್ಯದ ಅಧಿಕಾರಿಗಳು, ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ವರದಿ ಮಾಡಿದ್ದಾರೆ. ಬಳಿಕ ಭಾರತ ತಂಡದ ಆಡಳಿತಕ್ಕೆ ವಿಷಯ ತಿಳಿಸಲಾಗಿದ್ದು 14 ದಿನಗಳೊಳಗೆ ಬೌಲಿಂಗ್ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿದೆ.
ದುಬೈ[ಜ.14]: ಭಾರತ ತಂಡದ ಬ್ಯಾಟ್ಸ್‌ಮನ್ ಹಾಗೂ ಅರೆಕಾಲಿಕ ಸ್ಪಿನ್ನರ್ ಅಂಬಟಿ ರಾಯುಡು ಅನುಮಾನಸ್ಪದ ಬೌಲಿಂಗ್ ಶೈಲಿಯ ಸುಳಿಯಲ್ಲಿ ಸಿಲುಕಿದ್ದಾರೆ.
ರೋಹಿತ್ ಶರ್ಮಾ ಶತಕ ವ್ಯರ್ಥ -ಏಕದಿನದಲ್ಲಿ ಭಾರತಕ್ಕೆ ಸೋಲಿನ ಶಾಕ್!
ಶನಿವಾರ ಸಿಡ್ನಿಯಲ್ಲಿ ಆಸ್ಪ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರಾಯುಡು 2 ಓವರ್ ಬೌಲಿಂಗ್ ಮಾಡಿದ್ದರು. ಅವರ ಬೌಲಿಂಗ್ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ ಪಂದ್ಯದ ಅಧಿಕಾರಿಗಳು, ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ವರದಿ ಮಾಡಿದ್ದಾರೆ. ಬಳಿಕ ಭಾರತ ತಂಡದ ಆಡಳಿತಕ್ಕೆ ವಿಷಯ ತಿಳಿಸಲಾಗಿದ್ದು 14 ದಿನಗಳೊಳಗೆ ಬೌಲಿಂಗ್ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿದೆ. ಆದರೆ ಪರೀಕ್ಷೆಯ ಫಲಿತಾಂಶ ಹೊರಬೀಳುವ ವರೆಗೂ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮುಂದುವರಿಸಬಹುದಾಗಿದೆ.
ಏಕದಿನ: ಪಾಂಡ್ಯ,ರಾಹುಲ್ ಸ್ಥಾನಕ್ಕೆ ಶುಭ್‌ಮಾನ್-ವಿಜಯ್‌ಗೆ ಸ್ಥಾನ!
ತಮ್ಮ 46 ಏಕದಿನ ಪಂದ್ಯಗಳ ವೃತ್ತಿ ಬದುಕಿನಲ್ಲಿ ಕೇವಲ 20.1 ಓವರ್ ಬೌಲ್ ಮಾಡಿರುವ ರಾಯುಡು 3 ವಿಕೆಟ್ ಕಿತ್ತಿದ್ದಾರೆ. ತಾವಾಡಿರುವ 6 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅವರು ಒಮ್ಮೆಯೂ ಬೌಲಿಂಗ್ ಮಾಡಿಲ್ಲ.