ಏಕದಿನ: ಪಾಂಡ್ಯ,ರಾಹುಲ್ ಸ್ಥಾನಕ್ಕೆ ಶುಭ್‌ಮಾನ್-ವಿಜಯ್‌ಗೆ ಸ್ಥಾನ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 13, Jan 2019, 8:44 AM IST
ODI Cricket Mayank Agarwal and Vijay Shankar replace suspended Hardik pandya KL Rahul
Highlights

ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯಿಂದ ಅಮಾನತಾಗಿರುವ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ತವರಿನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಇದೀಗ ಇವರಿಬ್ಬರ ಸ್ಥಾನಕ್ಕೆ ಶುಭ್‌ಮಾನ್ ಗಿಲ್ ಹಾಗೂ ತಮಿಳುನಾಡಿನ ವಿಜಯ್ ಶಂಕರ್ ಸ್ಥಾನ ಪಡೆದಿದ್ದಾರೆ.

ನವದೆಹಲಿ(ಜ.13): ಅಮಾನತುಗೊಂಡಿರುವ ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ ಬದಲಿಗೆ ಅಂಡರ್ 19 ತಂಡದಲ್ಲಿ ಮಿಂಚಿದ ಶುಭ್‌ಮಾನ್ ಗಿಲ್ ಹಾಗೂ ತಮಿಳುನಾಡಿನ ವಿಜಯ್‌ ಶಂಕರ್‌ಗೆ ಭಾರತ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆಸ್ಪ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಇಬ್ಬರೂ ತಂಡ ಕೂಡಿಕೊಳ್ಳಲಿದ್ದಾರೆ. 

ಇದನ್ನೂ ಓದಿ: ಪಾಂಡ್ಯ, ರಾಹುಲ್‌ ಸಸ್ಪೆಂಡ್: ಸರಣಿಯಿಂದ ಗೇಟ್’ಪಾಸ್

ಇದೇ ಮೊದಲ ಬಾರಿಗೆ ಶುಭ್‌ಮಾನ್ ಗಿಲ್ ಭಾರತ ಸೀಮಿತ ಓವರ್‌ ತಂಡದಲ್ಲಿ ಸ್ಥಾನ ನೀಡಲಾಗಿದೆ. ಅಂಡರ್ 19 ಹಾಗೂ ಪ್ರಸಕ್ತ ರಣಜಿಯಲ್ಲಿ  ಉತ್ತಮ ಪ್ರದರ್ಶನ ತೋರಿದ್ದರು. ನ್ಯೂಜಿಲೆಂಡ್‌ ಪ್ರವಾಸಕ್ಕೂ ಈ ಇಬ್ಬರು ಮುಂದುವರಿಯುವ ಸಾಧ್ಯತೆ ಇದೆ. 

ಇದನ್ನೂ ಓದಿ: ಪಾಂಡ್ಯ-ರಾಹುಲ್‌ ವಿಚಾರಣೆ: ಬಿಸಿಸಿಐ ಆಡಳಿತ ಸಮಿತಿಯಲ್ಲಿ ಒಡಕು

ಆಸ್ಟ್ರೇಲಿಯಾ ವಿರುದ್ದದ ಏಕದಿನದಲ್ಲಿ ಸ್ಥಾನ ಪಡೆದಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಖಾಸಗಿ ಟಿವಿ ಶೋನಲ್ಲಿ ಮಹಿಳೆಯರ ಕುರಿತು ಅಸಭ್ಯ ಹೇಳಿಕೆ ನೀಡಿ ಅಮಾನತಾಗಿದ್ದಾರೆ. ಇದೀಗ ಪಾಂಡ್ಯ ಹಾಗೂ ರಾಹುಲ್ ವಿಚಾರಣೆಯನ್ನ ಬಿಸಿಸಿಐ ಕೈಗೆತ್ತಿಕೊಂಡಿದೆ.
 

loader