ಫೆಬ್ರವರಿ 15ರಿಂದ ಮಾರ್ಚ್ 29ರ ವರೆಗೆ ನೋಂದಣಿಗೆ ಅವಕಾಶವಿದೆ. ಆಸಕ್ತರು https://tcsworld10k.procam.in ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಬಹುದು ಎಂದು ಆಯೋಜಕರು ತಿಳಿಸಿದ್ದಾರೆ. ಪ್ರತಿ ವರ್ಷವೂ ಟಿಸಿಎಸ್ ವರ್ಲ್ಡ್ 10ಕೆ ಅತ್ಯುತ್ತಮ ರೇಸ್ ಡೇ ಅನುಭವನ್ನು ನೀಡುತ್ತಾ ಬಂದಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಬೆಂಗಳೂರು(ಫೆ.15): 16ನೇ ಆವೃತ್ತಿಯ ಬೆಂಗಳೂರು 10ಕೆ ಮ್ಯಾರಥಾನ್ ಮುಂಬರುವ ಏಪ್ರಿಲ್ 28ರಂದು ಭಾನುವಾರ ನಡೆಯಲಿದೆ ಎಂದು ಆಯೋಜಕರು ಬುಧವಾರ ಘೋಷಿಸಿದ್ದಾರೆ. 10ಕೆ ಓಟದ ಜೊತೆಗೆ ಮಜಾ ರನ್(5.1 ಕಿ.ಮೀ), ಸಿಲ್ವರ್ಸ್ ರನ್ ಮತ್ತು ಚಾಂಪಿಯನ್ಸ್ ವಿತ್ ಡಿಸೆಬಿಲಿಟ(4.2 ಕಿ.ಮೀ.) ಓಟದ ಸ್ಪರ್ಧೆ ಕೂಡಾ ಇರಲಿದೆ.
ಫೆಬ್ರವರಿ 15ರಿಂದ ಮಾರ್ಚ್ 29ರ ವರೆಗೆ ನೋಂದಣಿಗೆ ಅವಕಾಶವಿದೆ. ಆಸಕ್ತರು https://tcsworld10k.procam.in ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಬಹುದು ಎಂದು ಆಯೋಜಕರು ತಿಳಿಸಿದ್ದಾರೆ. ಪ್ರತಿ ವರ್ಷವೂ ಟಿಸಿಎಸ್ ವರ್ಲ್ಡ್ 10ಕೆ ಅತ್ಯುತ್ತಮ ರೇಸ್ ಡೇ ಅನುಭವನ್ನು ನೀಡುತ್ತಾ ಬಂದಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಮಾಣಿಕ್ ಷಾ ಪೆರೇಡ್ ಮೈದಾನದಿಂದ ಆರಂಭ: 16ನೇ ಆವೃತ್ತಿಯ ಬೆಂಗಳೂರು 10ಕೆ ಮ್ಯಾರಥಾನ್ ಕೂಟವು ಭಾರತೀಯ ಸೇನೆ, ಕರ್ನಾಟಕ ಹಾಗೂ ಕೇರಳ ಉಪ ಪ್ರದೇಶದ ಬೆಂಬಲದೊಂದಿಗೆ ಈ ಬಾರಿ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಷಾ ಪೆರೇಡ್ ಮೈದಾನದಿಂದ ಮ್ಯಾರಥಾನ್‌ಗೆ ಚಾಲನೆ ಸಿಗಲಿದೆ.
ಗುಡ್ ನ್ಯೂಸ್ ಕೊಟ್ಟ ಬಿಸಿಸಿಐ: 2024ರ ಐಪಿಎಲ್ ಬಗ್ಗೆ ಮಹತ್ವದ ಅಪ್‌ಡೇಟ್ ಕೊಟ್ಟ ಅರುಣ್ ಧುಮಾಲ್..!
ಒಟ್ಟು 2,10,000 ಯುಎಸ್ ಡಾಲರ್ ಬಹುಮಾನ ಮೊತ್ತವನ್ನು ಹೊಂದಿರುವ ವಿಶ್ವದ ಪ್ರೀಮಿಯರ್ 10ಕೆ ಸ್ಪರ್ಧೆಯಲ್ಲಿ ವಿಶ್ವದಾದ್ಯಂತ ಇರುವ ಹವ್ಯಾಸಿ ಓಟಗಾರರೊಂದಿಗೆ ಕೆಲವು ಪ್ರಮುಖ ಭಾರತೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ವಿಶ್ವದ ಯಾವುದೇ ಭಾಗದಿಂದ ಬೇಕಿದ್ದರೂ ವರ್ಚುವಲ್ ಆಗಿ ಓಡಬಹುದು: ವಿಶ್ವದ ಯಾವುದೇ ಭಾಗದ ಓಟಗಾರರು ಟಿಸಿಎಸ್ ವರ್ಲ್ಡ್ ಬೆಂಗಳೂರು 10ಕೆ ಅಪ್ಲಿಕೇಷನ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ವರ್ಚುವಲ್ ಆಗಿ 5ಕೆ ಹಾಗೂ 10ಕೆ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.