ಕೌನ್ ಬನೇಗಾ ಕರೋಡ್‌ಪತಿ ಕ್ವಿಝ್ ಕಾರ್ಯಕ್ರಮದಲ್ಲಿ ಕೇಳಲಾದ ಕ್ರಿಕೆಟ್ ಸಂಬಂಧಿಸಿದ ಪ್ರಶ್ನೆಗೆ ನಿಮಗೆ ಉತ್ತರ ಗೊತ್ತಾ? ಇದು 6.40 ರುಪಾಯಿ ಮೌಲ್ಯದ ಪ್ರಶ್ನೆ
ಮುಂಬೈ: ಬಾಲಿವುಡ್ ದಿಗ್ಗಜ ನಟ ಅಮಿತಾಬ್ ಬಚ್ಚನ್ ಅವರು ತಮ್ಮ ಜನಪ್ರಿಯ 'ಕೌನ್ ಬನೇಗಾ ಕರೋಡ್‌ಪತಿ' ಕ್ವಿಝ್ ಕಾರ್ಯಕ್ರಮದಲ್ಲಿ ಆಗಾಗ ಕ್ರಿಕೆಟ್ ಸಂಬಂಧಿತ ಪ್ರಶ್ನೆಗಳನ್ನು ಕೇಳುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುತ್ತಾ ಬಂದಿದ್ದಾರೆ. ಇದೀಗ ಇತ್ತೀಚೆಗಿನ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಬಚ್ಚನ್, 6.40 ಲಕ್ಷ ರುಪಾಯಿ ಬಹುಮಾನವಾಗಿ ಟೆಸ್ಟ್ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಒಂದು ಆಸಕ್ತಿದಾಯಕ ಹಾಗೂ ಅಷ್ಟೇ ಜಾಣ್ಮೆಯ ಪ್ರಶ್ನೆ ಕೇಳಿ ಗಮನ ಸೆಳೆದಿದ್ದಾರೆ.
ಇತ್ತೀಚೆಗಿನ ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾಕಷ್ಟು ಮಹತ್ವದ ಬದಲಾವಣೆಗಳಾಗಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಈ ಕಾರಣಕ್ಕಾಗಿಯೇ ಈ ಕ್ರಿಕೆಟ್ ಸಾಕಷ್ಟು ರೋಚಕತೆ ಹಾಗೂ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದೆ. ಮೊದಲೆಲ್ಲಾ ಬಹುತೇಕ ಟೆಸ್ಟ್ ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗುತ್ತಿದ್ದವು. ಆದರೆ ಇತ್ತೀಚಿಗಿನ ವರ್ಷಗಳಲ್ಲಿ ಡ್ರಾ ಆಗುವುದಕ್ಕಿಂತ ಸ್ಪಷ್ಟ ಫಲಿತಾಂಶ ಬಂದ ಪಂದ್ಯಗಳೇ ಹೆಚ್ಚು ಎನ್ನುವಂತಾಗಿವೆ.
ಜಡ್ಡು-ಅಶ್ವಿನ್ ಮಿಂಚಿನ ಬೌಲಿಂಗ್; ಭಾರತದ ಹಿಡಿತದಲ್ಲಿ ಮುಂಬೈ ಟೆಸ್ಟ್
ಇದೀಗ 6.40 ರುಪಾಯಿ ಮೌಲ್ಯದ ಪ್ರಶ್ನೆಯ ರೂಪವಾಗಿ ಅಮಿತಾಬ್ ಬಚ್ಚನ್, "2022ರಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಯಾವ ತಂಡ ಟೆಸ್ಟ್ ಪಂದ್ಯದ ಮೊದಲ ದಿನವೇ 500+ ರನ್ ಬಾರಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿಕೊಂಡಿದೆ?" ಎನ್ನುವ ಪ್ರಶ್ನೆಯನ್ನು ಕೇಳಿದರು.
ಇದಕ್ಕೆ ಆಯ್ಕೆಗಳು, ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್. ಹೀಗೆ 4 ಆಯ್ಕೆಗಳನ್ನು ನೀಡಲಾಗಿತ್ತು.
ಈ ಪ್ರಶ್ನೆಗೆ ಸರಿಯಾದ ಉತ್ತರ ಆಯ್ಕೆ ಡಿ. ಇಂಗ್ಲೆಂಡ್ ಆಗಿದೆ. ಬ್ರೆಂಡನ್ ಮೆಕ್ಕಲಂ ಮಾರ್ಗದರ್ಶನದ ಇಂಗ್ಲೆಂಡ್ ತಂಡವು ಡಿಸೆಂಬರ್ 01, 2022ರಲ್ಲಿ ಪಾಕಿಸ್ತಾನ ವಿರುದ್ದ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲ ದಿನವೇ 4 ವಿಕೆಟ್ ಕಳೆದುಕೊಂಡು 506 ರನ್ ಕಲೆಹಾಕಿತ್ತು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ 500+ ರನ್ ಬಾರಿಸಿದ ಮೊದಲ ತಂಡ ಎನ್ನುವ ಹಿರಿಮೆಗೆ ಪಾತ್ರವಾಗಿತ್ತು.
