ಕಳೆದ ವರ್ಷದ[2017] ಜನವರಿಯಲ್ಲಿ ಭಾರತದ ವಿರುದ್ದ ಪಂದ್ಯವಾಡುವಾಗ ಹಿಮ್ಮಡಿ ಗಾಯಕ್ಕೆ ತುತ್ತಾಗಿದ್ದ ಸ್ಟೇನ್ ಆ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದಲೂ ಹೊರಗುಳಿದಿದ್ದರು.
ಕೇಪ್’ಟೌನ್[ಜೂ.11]: ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಲಂಕಾ ವಿರುದ್ಧ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ 15 ಆಟಗಾರರನ್ನೊಳಗೊಂಡ ಬಲಿಷ್ಠ ತಂಡವನ್ನು ಪ್ರಕಟಿಸಲಾಗಿದ್ದು, ವರ್ಷದ ಬಳಿಕ ಹಿರಿಯ ವೇಗಿ ಡೇಲ್ ಸ್ಟೇನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕಳೆದ ವರ್ಷದ[2017] ಜನವರಿಯಲ್ಲಿ ಭಾರತದ ವಿರುದ್ದ ಪಂದ್ಯವಾಡುವಾಗ ಹಿಮ್ಮಡಿ ಗಾಯಕ್ಕೆ ತುತ್ತಾಗಿದ್ದ ಸ್ಟೇನ್ ಆ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದಲೂ ಹೊರಗುಳಿದಿದ್ದರು. ದಕ್ಷಿಣ ಆಫ್ರಿಕಾ ಪರ ಗರಿಷ್ಟ ವಿಕೆಟ್ ಪಡೆದ ಶಾನ್ ಪೊಲ್ಲಾಕ್[421] ದಾಖಲೆ ಸರಿಗಟ್ಟಲು ಡೇಲ್ ಸ್ಟೇನ್’ಗೆ ಇನ್ನು ಕೇವಲ 3 ವಿಕೆಟ್’ಗಳ ಅವಶ್ಯಕತೆಯಿದ್ದು, ಲಂಕಾ ಸರಣಿಯಲ್ಲಿ ಈ ದಾಖಲೆ ನಿರ್ಮಿಸಲು ಸ್ಟೇನ್ ತುದಿಗಾಲಿನಲ್ಲಿ ನಿಂತಿದ್ದಾರೆ.
ಐಪಿಎಲ್’ನಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿ ಅರ್ಧದಲ್ಲೇ ತವರಿಗೆ ಮರಳಿದ್ದ ಕಗಿಸೋ ರಬಾಡ ಚೇತರಿಸಿಕೊಂಡಿದ್ದು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಎಬಿ ಡಿವಿಲಿಯರ್ಸ್ ನಿವೃತ್ತಿಯಾಗಿರುವ ಹಿನ್ನಲೆಯಲ್ಲಿ ಹೆನ್ರೀಚ್ ಕ್ಲಸೇನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನು ತಂಡದಲ್ಲಿ ಮೂವರು ಸ್ಪಿನ್ನರ್’ಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ತಬ್ರೀಜ್ ಸಂಶಿ, ಶಾನ್ ವಾನ್ ಬೆರ್ಗ್ ಜತೆಗೆ ಕೇಶವ್ ಮಹರಾಜ್ ಇದೇ ಮೊದಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮೊದಲ ಟೆಸ್ಟ್ ಪಂದ್ಯವು ಗಾಲೆಯಲ್ಲಿ ಜುಲೈ 12-16ರ ವರೆಗೆ ನಡೆಯಲಿದ್ದು, ಇದಾದ 4 ದಿನಗಳ ಬಳಿಕ ಕೊಲೊಂಬೊದಲ್ಲಿ ಎರಡನೇ ಟೆಸ್ಟ್ ಪಂದ್ಯ ಜರುಗಲಿದೆ. ಇದಾದ ನಂತರ 2 ಏಕದಿನ ಪಂದ್ಯಗಳ ಸರಣಿಯಾಡಲಿದೆ.
ತಂಡ ಹೀಗಿದೆ:
ಫಾಪ್ ಡು ಪ್ಲಸಿಸ್[ನಾಯಕ], ಹಾಶೀಂ ಆಮ್ಲಾ, ತೆಂಬಾ ಬವುಮಾ, ಕ್ವಿಂಟನ್ ಡಿಕಾಕ್, ಥೆನಿಸ್ ಡಿ ಬ್ರಿಯಾನ್, ಡೀನ್ ಎಲ್ಗಾರ್, ಹೆನ್ರೀಚ್ ಕ್ಲಸೇನ್, ಕೇಶವ್ ಮಹರಾಜ್, ಏಯ್ಡನ್ ಮಾರ್ಕ್’ರಮ್, ಲುಂಗಿಸನಿ ಎನ್’ಗಿಡಿ, ವೆರ್ನಾನ್ ಫಿಲಾಂಡರ್, ಕಗಿಸೋ ರಬಾಡ, ತಬ್ರೀಜ್ ಸಂಶಿ, ಡೇಲ್ ಸ್ಟೇನ್,ಶಾನ್ ವಾನ್ ಬೆರ್ಗ್.
