ದಕ್ಷಿಣ ಆಫ್ರಿಕಾ ಸೂಪರ್ ಸ್ಟಾರ್ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದಾರೆ. ಇದು ನಿವೃತ್ತಿ ಘೋಷಿಸಲು ಸರಿಯಾದ ಸಮಯವೆಂದು ಭಾವಿಸಿ ಎಬಿಡಿ ಈ ತೀರ್ಮಾನಕ್ಕೆ ಬಂದಿದ್ದು, 14 ವರ್ಷಗಳ ವರ್ಣರಂಜಿತ ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.
ಕೇಪ್’ಟೌನ್[ಮೇ.23]: ದಕ್ಷಿಣ ಆಫ್ರಿಕಾ ಸೂಪರ್ ಸ್ಟಾರ್ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದಾರೆ. ಇದು ನಿವೃತ್ತಿ ಘೋಷಿಸಲು ಸರಿಯಾದ ಸಮಯವೆಂದು ಭಾವಿಸಿ ಎಬಿಡಿ ಈ ತೀರ್ಮಾನಕ್ಕೆ ಬಂದಿದ್ದು, 14 ವರ್ಷಗಳ ವರ್ಣರಂಜಿತ ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.
ನಾನು ತಕ್ಷಣಕ್ಕೆ ಜಾರಿಯಾಗುವಂತೆ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. 114 ಟೆಸ್ಟ್, 228 ಏಕದಿನ ಹಾಗೂ 78 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ನನಗೆ ನಿವೃತ್ತಿ ಘೋಷಿಸಲು ಸರಿಯಾದ ಸಮಯವಾಗಿದೆ. ಬೇರೆಯವರಿಗೆ ಅವಕಾಶ ಒದಗಿಸಲು ಇದು ಸರಿಯಾದ ಸಮಯ ಜತೆಗೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ದಣಿದಿದ್ದೇನೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಎಬಿ ಡಿವಿಲಿಯರ್ಸ್ ಟೆಸ್ಟ್, ಏಕದಿನ ಹಾಗೂ ಟಿ20ಯ ಮೂರೂ ಅಂತರಾಷ್ಟ್ರೀಯ ಮಾದರಿಯಲ್ಲಿ ಸುಮಾರು 50ರ ಸರಾಸರಿಯಲ್ಲಿ 20,014 ರನ್ ಕಲೆಹಾಕಿದ್ದಾರೆ. ದಕ್ಷಿಣ ಆಫ್ರಿಕಾ ಪರ ಎಬಿಡಿ ಕನಿಷ್ಠ ಮುಂಬರುವ 2019ರ ವಿಶ್ವಕಪ್ ಆಡುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಇದೊಂದು ಕಠಿಣ ನಿರ್ಧಾರ. ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿ ಜಯದ ಬಳಿಕ ನನಗೆ ನಿವೃತ್ತಿ ಘೋಷಿಸಲು ಸರಿಯಾದ ಸಮಯ ಎನಿಸುತ್ತಿದೆ ಎಂದು ಎಬಿಡಿ ಹೇಳಿದ್ದಾರೆ.
