ಎರಡನೇ ಟೆಸ್ಟ್ ಪಂದ್ಯದ ವೇಳೆ ರಬಾಡ 11 ವಿಕೆಟ್ ಕಬಳಿಸಿ ದಕ್ಷಿಣ ಆಫ್ರಿಕಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಕೇಪ್‌'ಟೌನ್(ಮಾ.21): ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌'ನಲ್ಲಿ ಅನುಚಿತ ವರ್ತನೆ ತೋರಿದ ಕಾರಣ ನಿಷೇಧಕ್ಕೆ ಒಳಗಾಗಿದ್ದ ದಕ್ಷಿಣ ಆಫ್ರಿಕಾ ತಂಡದ ವೇಗಿ ಕಗಿಸೋ ರಬಾಡ ಮೇಲೆ ವಿಧಿಸಿದ್ದ 2 ಪಂದ್ಯಗಳ ನಿಷೇಧವನ್ನು ಐಸಿಸಿ ಹಿಂಪಡೆದಿದೆ.

ಇದರಿಂದಾಗಿ ಆಸೀಸ್ ವಿರುದ್ಧದ ಅಂತಿಮ 2 ಟೆಸ್ಟ್‌'ಗಳಿಗೆ ರಬಾಡ ಲಭ್ಯರಾಗಿದ್ದಾರೆ. 2ನೇ ಟೆಸ್ಟ್‌'ನಲ್ಲಿ ರಬಾಡ ಅನುಚಿತ ವರ್ತನೆ ತೋರಿದ್ದರು.

ಪಂದ್ಯದ ಅಂಪೈರ್‌'ಗಳು ನೀಡಿದ್ದ ದೂರಿನ ಸಂಬಂಧ, ಐಸಿಸಿ ರಬಾಡಗೆ 2 ಪಂದ್ಯ ನಿಷೇಧ ಹೇರುವ ಜತೆಗೆ ಪಂದ್ಯದ ಸಂಭಾವನೆಯ ಶೇ.50ರಷ್ಟನ್ನು ದಂಡವಾಗಿ ವಿಧಿಸಿತ್ತು. ತಮ್ಮ ವಿರುದ್ಧ ಕೈಗೊಂಡ ಕ್ರಮ ಪ್ರಶ್ನಿಸಿ ರಬಾಡ ಮೇಲ್ಮನವಿ ಸಲ್ಲಿಸಿದ್ದರು.

ಎರಡನೇ ಟೆಸ್ಟ್ ಪಂದ್ಯದ ವೇಳೆ ರಬಾಡ 11 ವಿಕೆಟ್ ಕಬಳಿಸಿ ದಕ್ಷಿಣ ಆಫ್ರಿಕಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.