ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಮೊದಲ ಪಂದ್ಯವನ್ನು ಗೆದ್ದು 1-0 ಮುನ್ನಡೆ ಕಾಯ್ದುಕೊಂಡಿರುವ ಫಾಪ್ ಡು ಪ್ಲೆಸಿಸ್ ಪಡೆ ಎರಡನೇ ಪಂದ್ಯವನ್ನು ಜಯಿಸಿ ಸರಣಿ ಕೈವಶ ಮಾಡಿಕೊಳ್ಳುವ ಇರಾದೆಯಲ್ಲಿದೆ.

ಸೆಂಚೂರಿಯನ್(ಜ.10): ಭಾರತ ವಿರುದ್ಧ ಜ.13ರಿಂದ ಸೆಂಚೂರಿಯನ್‌'ನಲ್ಲಿ ಆರಂಭಗೊಳ್ಳಲಿರುವ 2ನೇ ಟೆಸ್ಟ್ ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ತಂಡ ಪ್ರಕಟಗೊಂಡಿದೆ. ಗಾಯಾಳು ಡೇಲ್ ಸ್ಟೈನ್ ತಂಡದಿಂದ ಹೊರಬಿದ್ದಿದ್ದು, ಯುವ ವೇಗದ ಬೌಲರ್‌'ಗಳಾದ ಡುಯಾನೆ ಓಲಿವರ್ ಹಾಗೂ ಲುಂಗಿ ಎನ್‌'ಜಿಡಿಗೆ ಸ್ಥಾನ ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2016-17ರ ಸಾಲಿನಲ್ಲಿ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಓಲಿವರ್, ಈ ವರೆಗೂ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಶ್ರೀಲಂಕಾ, ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧ ಅವರು ಆಡಿದ್ದರು. ಇದೇ ವೇಳೆ, ಎನ್‌'ಜಿಡಿ ಇನ್ನೂ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌'ಗೆ ಕಾಲಿಟ್ಟಿಲ್ಲ. ಆದರೆ ಈ ವರೆಗೂ 3 ಟಿ20 ಪಂದ್ಯಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮೊದಲ ಟೆಸ್ಟ್‌ನಲ್ಲಿ ಆಡಿದ ಆಟಗಾರರನ್ನು ಆಫ್ರಿಕಾ ಉಳಿಸಿಕೊಂಡಿದೆ.

ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಮೊದಲ ಪಂದ್ಯವನ್ನು ಗೆದ್ದು 1-0 ಮುನ್ನಡೆ ಕಾಯ್ದುಕೊಂಡಿರುವ ಫಾಪ್ ಡು ಪ್ಲೆಸಿಸ್ ಪಡೆ ಎರಡನೇ ಪಂದ್ಯವನ್ನು ಜಯಿಸಿ ಸರಣಿ ಕೈವಶ ಮಾಡಿಕೊಳ್ಳುವ ಇರಾದೆಯಲ್ಲಿದೆ.