Asianet Suvarna News Asianet Suvarna News

ವಿಜಯಪುರ: ಗೊಂದಲಗಳ ಮಧ್ಯೆ ಕೊನೆಗೊಂಡ ರಾಜ್ಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿ..!

ಪ್ರಥಮ ಬಾರಿ ಪಟ್ಟಣದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಗಳು ನಡೆಯುತ್ತಿರುವ ಕಾರಣ ತಾಲೂಕಿನ ಕ್ರೀಡಾ ಪ್ರೇಮಿಗಳು ಅತೀವ ಉತ್ಸಾಹದಿಂದ ಕಬಡಿ ಪಂದ್ಯಾವಳಿಗಳನ್ನು ಕಣ್ತುಂಬಿಕೊಳ್ಳಲು ಆಗಮಿಸಲಾಗಿ ಅಸಮರ್ಪಕ ಆಯೋಜನೆಯಿಂದ ಅಲ್ಲಲ್ಲಿ ಅವ್ಯವಸ್ಥೆಯ ಆಗರವಾಗಿದ್ದು ಕಂಡುಬಂದಿತು.

State Level Kabaddi Tournament Ends Amid Confusion in Vijayapura grg
Author
First Published Nov 22, 2023, 2:00 AM IST

- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ(ನ.22): ಪಟ್ಟಣದ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ನೇತೃತ್ವದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಂಯೋಗದಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಗಳು ಇಚ್ಛಾಶಕ್ತಿ ಕೊರತೆ, ಗೊಂದಲ ಹಾಗೂ ಅವ್ಯವಸ್ಥೆಗಳ ಮಧ್ಯೆ ಕೊನೆಗೊಂಡವು. ಪ್ರಥಮ ಬಾರಿ ಪಟ್ಟಣದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಗಳು ನಡೆಯುತ್ತಿರುವ ಕಾರಣ ತಾಲೂಕಿನ ಕ್ರೀಡಾ ಪ್ರೇಮಿಗಳು ಅತೀವ ಉತ್ಸಾಹದಿಂದ ಕಬಡಿ ಪಂದ್ಯಾವಳಿಗಳನ್ನು ಕಣ್ತುಂಬಿಕೊಳ್ಳಲು ಆಗಮಿಸಲಾಗಿ ಅಸಮರ್ಪಕ ಆಯೋಜನೆಯಿಂದ ಅಲ್ಲಲ್ಲಿ ಅವ್ಯವಸ್ಥೆಯ ಆಗರವಾಗಿದ್ದು ಕಂಡುಬಂದಿತು.

ವಸತಿ ಅವ್ಯವಸ್ಥೆ ಆರೋಪ..!

ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಆಗಮಿಸಿದ ಕ್ರೀಡಾಪಟುಗಳಿಗೆ ಆಯೋಜಕರು ಸಮರ್ಪಕ ವಸತಿ ವ್ಯವಸ್ಥೆ ಕಲ್ಪಿಸದ ಕಾರಣ ಕೆಲ ಕ್ರೀಡಾಪಟುಗಳು ತಮ್ಮ ಅಸಮಾಧಾನ ಹೊರಹಾಕಿದರು.

ಬಿಜೆಪಿಯವರೇ ವಿರೋಧ ಪಕ್ಷದ ನಾಯಕರಾಗುತ್ತಾರೆ: ಗೋವಿಂದ ಕಾರಜೋಳ

ಅಸಮರ್ಪಕ ಊಟದ ವ್ಯವಸ್ಥೆ..!

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕ್ರೀಡಾಪಟುಗಳಿಗೆ ಸಮರ್ಪಕ ಟೋಕನ್ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಇರದ ಕಾರಣ ಕ್ರೀಡಾಪಟುಗಳು ಆಯೋಜಕರು ವಿರುದ್ಧ ಆಕ್ರೋಶ ಹೊರಹಾಕಿ ಹೊಟೇಲುಗಳಿಗೆ ತೆರಳಿ ಊಟ ಮಾಡಿಕೊಂಡು ಬರುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಕಾಡಿದ ಪ್ರಚಾರದ ಕೊರತೆ..! 

ಪಟ್ಟಣದಲ್ಲಿ ಪ್ರಥಮ ಬಾರಿ ರಾಜ್ಯ ಮಟ್ಟದ ಪಂದ್ಯಾವಳಿಗಳು ನಡೆಯುತ್ತಿರುವ ಕಾರಣ ಆಯೋಜಕರು ಸೂಕ್ತ ಪ್ರಚಾರ ಕಲ್ಪಿಸದ ಕಾರಣ ಪಂದ್ಯಾವಳಿಗಳನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅನೇಕ ಕ್ರೀಡಾಪ್ರೇಮಿಗಳಿಗೆ ಪಂದ್ಯಾವಳಿಗಳ ನಿರಾಸೆಯನ್ನುಂಟು ಮಾಡಿದವು. ಕೆಲ ಕ್ರೀಡಾಪ್ರೇಮಿಗಳಿಗೆ ರಾಜ್ಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗಳು ನಡೆಯುತ್ತಿರುವ ಬಗ್ಗೆ ಮಾಹಿತಿಯೇ ಇರಲಿಲ್ಲ, ಆಯೋಜಕರ ಪ್ರಚಾರದ ಕೊರತೆಯಿಂದ ಕ್ರೀಡಾಪ್ರೇಮಿಗಳು ನಿರಾಸೆ ಅನುಭವಿಸಿದ್ದಂತು ಸುಳ್ಳಲ್ಲ.

ವಿಜಯಪುರ: ಪಟಾಕಿ ಬದಲು ಗುಂಡು ಹಾರಿಸಿದ ಭೂಪ..!

ವಾಮಮಾರ್ಗದ ಗೆಲುವು ಆರೋಪ..! 

ವಿಜಯಪುರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ಫೈನಲ್ ಪಂದ್ಯ ನಡೆಯುತ್ತಿದ್ದ ಸಂದರ್ಭ ಅಕ್ರಮವಾಗಿ ವಿಜಯಪುರ ಜಿಲ್ಲೆಗೆ ಅಂಕಗಳನ್ನು ನೀಡಿ ಗೆಲುವು ಪಡೆಯಲಾಗಿದೆ ಎಂಬ ಆರೋಪ ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾಪಟುಗಳು ಹಾಗೂ ಶಿಕ್ಷಕರು ಆಯೋಜಕರ ಮೇಲೆ ಗಂಭೀರ ಆರೋಪ ಮಾಡಿದರು. ನೈಜವಾಗಿ ಕ್ರೀಡೆಗಳನ್ನು ಆಡುವ ಮೂಲಕ ಕ್ರೀಡಾ ಸ್ಫೂರ್ತಿ ಮೆರೆಯಬೇಕು ಈ ರೀತಿ ವಾಮಮಾರ್ಗದ ಗೆಲುವು ಸಲ್ಲ ಎಂದ ಆಕ್ರೋಶ ಹೊರಹಾಕಿದರು, ಅಲ್ಲದೇ ಆಯೋಜಕರ ಸ್ವಜನ ಪಕ್ಷಪಾತಕ್ಕೆ ಕೆಲ ಹೊತ್ತು ಸ್ಥಳದಲ್ಲೇ ಪ್ರತಿಭಟಿಸಿ, ಅನ್ಯಾಯವನ್ನು ಖಂಡಿಸಿದರು.

ಪರಸ್ಪರ ಸಂವಹನ ಕೊರತೆ..!

ಜವಾಬ್ದಾರಿಯಿಂದ ನುಣಿಚಿಕೊಳ್ಳುವಿಕೆ, ಆಯೋಜಕರು ನಿರುತ್ಸಾಹ ಹೀಗೆ ಅನೇಕ ಅಪಸವ್ಯಗಳ ನಡುವೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಬೇಕಿದ್ದ ಪಂದ್ಯಾವಳಿಗಳು ಅನೇಕ ಗೊಂದಲಗಳ ನಡುವೆ ಮುಕ್ತಾಯಗೊಂಡು ಕ್ರೀಡಾಪ್ರೀಯರಿಗೆ ನಿರಾಸೆಯನ್ನುಂಟು ಮಾಡಿದವು.

Follow Us:
Download App:
  • android
  • ios