Asianet Suvarna News Asianet Suvarna News

ವಿಜಯಪುರ: ಪಟಾಕಿ ಬದಲು ಗುಂಡು ಹಾರಿಸಿದ ಭೂಪ..!

ಗುಂಡು ಹಾರಿಸಿದ ವ್ಯಕ್ತಿ ಬಬಲೇಶ್ವರ ಪಟ್ಟಣದ ಸಿದ್ದರಾಯ ಆಡಿನ ಎಂದು ದೃಢಪಡಿಸಿರುವ ಪಟ್ಟಣದ ಪೊಲೀಸರು ತನಿಖೆ ನಡೆಸಿದ್ದೇವೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದನ್ನು ಗಮನಿಸಿದ್ದೇವೆ. ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
 

Instead of Firecrackers Shot Fired in Vijayapura grg
Author
First Published Nov 14, 2023, 10:30 PM IST

ವಿಜಯಪುರ(ನ.14): ದೀಪಾವಳಿ ಹಬ್ಬದ ಪ್ರಯುಕ್ತ ಮಾಡುವ ಲಕ್ಷ್ಮೀ ಪೂಜೆ ಬಳಿಕ‌ ಪಟಾಕಿ ಹಾರಿಸಿ ಸಂಭ್ರಮಿಸುವುದು ವಾಡಿಕೆ. ಆದರೆ, ಇಲ್ಲೊಬ್ಬರು ತಮ್ಮ ಬಳಿ ಇದ್ದ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಜಿಲ್ಲೆಯ ಬಬಲೇಶ್ವರದಲ್ಲಿ ಭಾನುವಾರ ಘಟನೆ ನಡೆದಿದ್ದು, ವಿಡಿಯೋ ವೈರಲ್‌ ಆಗಿದೆ.

ಈ ಕುರಿತ ಘಟನೆ ಈಗ ಪೊಲೀಸ್ ಠಾಣೆ ಅಂಗಳ ತಲುಪಿದೆ. ಗುಂಡು ಹಾರಿಸಿದ ವ್ಯಕ್ತಿ ಬಬಲೇಶ್ವರ ಪಟ್ಟಣದ ಸಿದ್ದರಾಯ ಆಡಿನ ಎಂದು ದೃಢಪಡಿಸಿರುವ ಪಟ್ಟಣದ ಪೊಲೀಸರು ತನಿಖೆ ನಡೆಸಿದ್ದೇವೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದನ್ನು ಗಮನಿಸಿದ್ದೇವೆ. ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಯಡಿಯೂರಪ್ಪರನ್ನು ಕಡೆಗಣಿಸದಿದ್ರೆ ನಾವೇ ಅಧಿಕಾರದಲ್ಲಿರುತ್ತಿದ್ದೆವು: ವಿಜುಗೌಡ ಪಾಟೀಲ

ಭಾನುವಾರ ದೀಪಾವಳಿಯ ಲಕ್ಷ್ಮೀ ಪೂಜೆ ಬಳಿಕ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಸಿದ್ದರಾಯ ಆಡಿನ ಬಳಿ ಪರವಾನಗಿ ಪಡೆದ ಪಿಸ್ತೂಲ್ ಇದೆ ಎಂದು ಹೇಳಲಾಗಿದೆ. ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇವರ ಪರಿಚಯಸ್ಥರೇ ತೇಲಿ ಬಿಟ್ಟಿದ್ದಾರೆ. ಈ ಘಟನೆ ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Follow Us:
Download App:
  • android
  • ios