ನವದೆಹಲಿ(ಮಾ.16): ಲೋಕಸಭಾ ಚುನಾವಣೆ ಜಾಹೀರಾತುಗಳನ್ನು ಐಪಿಎಲ್ ಪಂದ್ಯಗಳ ನೇರಪ್ರಸಾರದ ವೇಳೆ ಪ್ರಸಾರ ಮಾಡಲು ಸಮ್ಮತಿ ನೀಡಬೇಕೆಂದು ಸ್ಟಾರ್ ಇಂಡಿಯಾ, ಬಿಸಿಸಿಐಗೆ ಮನವಿ ಮಾಡಿದೆ.

ರಾತ್ರಿ 8ರ ಬದಲು 7ಕ್ಕೆ ಐಪಿಎಲ್- ಮುಂಬೈ ಇಂಡಿಯನ್ಸ್ ವಿರೋಧ! 

ಬಿಸಿಸಿಐ ಮಾಡಿಕೊಂಡಿರುವ ಒಪ್ಪಂದದಲ್ಲಿನ 8.6(ಬಿ) ನಿಯಮದ ಪ್ರಕಾರ, ಪಂದ್ಯಾವಳಿ ನೇರಪ್ರಸಾರದ ವೇಳೆ ರಾಜಕೀಯ ಹಾಗೂ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಜಾಹೀರಾತುಗಳನ್ನು ಪ್ರಸಾರ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಸ್ಟಾರ್ ಇದೀಗ ರಾಜಕೀಯ ಉದ್ದೇಶಿತ ಜಾಹೀರಾತು ಪ್ರಸಾರಕ್ಕೆ ಬಿಸಿಸಿಐನಿಂದ ಅನುಮತಿ ಪಡಬೇಕಾಗಿದೆ.

ಐಪಿಎಲ್ 2019: ನಗಿಸಲು ಬರ್ತಿದ್ದಾರೆ RCB ತಂಡದ Mr.ನ್ಯಾಗ್ಸ್!

ಬಹುನಿರೀಕ್ಷಿತ 12 ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇದೇ ಮಾರ್ಚ್ 23ರಂದು ಆರಂಭವಾಗಲಿದ್ದು, ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. 

ಐಪಿಎಲ್ 2019ರ ವೇಳಾಪಟ್ಟಿ ಪ್ರಕಟ-ಉದ್ಘಾಟನಾ ಪಂದ್ಯದಲ್ಲಿ RCB -CSK ಫೈಟ್!