ಬೆಂಗಳೂರು(ಮಾ.09): 12ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಇನ್ನು ಕೆಲ ದಿನಗಳು ಮಾತ್ರ ಬಾಕಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ RCB ತಂಡದ ಭಾಗವಾಗಿರೋ ಮಿಸ್ಟರ್ ನ್ಯಾಗ್ಸ್ ಈ ಬಾರಿಯೂ ಅಭಿಮಾನಿಗಳನ್ನ ನಗಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಅಣ್ಣಾವ್ರ ಹಾಡು ನುಡಿಸಿದ ಎಬಿಡಿ; ಮಿ.360 ಮತ್ತೊಂದು ಪ್ರತಿಭೆ ಅನಾವರಣ

RCB ತಂಡದಲ್ಲಿ ಆಟಗಾರರ ಜೊತೆ ಹಾಸ್ಯ ಹಾಗೂ ಚೇಷ್ಟೆಗಳಿಂದ ಜನಪ್ರಿಯವಾಗಿರುವ ಮಿಸ್ಟರ್ ನ್ಯಾಗ್ಸ್ ಇದೀಗ 12ನೇ ಆವೃತ್ತಿಯಲ್ಲೂ ಮೋಡಿ ಮಾಡಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟಿಗರಲ್ಲಿ ಕನ್ನಡ ಮಾತನಾಡಿಸಿ, ಹಾಸ್ಯ ಚಟಾಕಿಗಳ ಮೂಲಕ ನ್ಯಾಗ್ಸ್ ಭಾರಿ ಸದ್ದು ಮಾಡಿದ್ದಾರೆ.

ಇದನ್ನೂ ಓದಿ: (ವಿಡಿಯೋ)ಮಿ. ನಾಗ್ಸ್ ಪ್ರಶ್ನೆಗೆ ಕನ್ನಡದಲ್ಲೇ ಉತ್ತರಿಸಿದ ಕೊಹ್ಲಿ!

ಸುವರ್ಣನ್ಯೂಸ್.ಕಾಂ ಜೊತೆ ಮಾತನಾಡಿದ ಮಿಸ್ಟರ್ ನ್ಯಾಗ್ಸ್, RCB ತಂಡ ಸೇರಿಕೊಳ್ಳಲು ಉತ್ಸುಕನಾಗಿದ್ದೇನೆ. ಯುವ ಹಾಗೂ ಅನುಭವಿ ಆಟಗಾರರನ್ನೊಳಗೊಂಡ RCB ತಂಡ ಬ್ಯಾಲೆನ್ಸ್ ಆಗಿದೆ. ತಂಡದ ಜೊತೆ ಪ್ರಯಾಣ ಮಾಡಲು, ತಂಡದ ಆಟಗಾರರ ಜೊತೆಗಿನ ಮಸ್ತಿ ಅತೀವ ಖುಷಿ ನೀಡಿದೆ. ಈ ಆವೃತ್ತಿಯಲ್ಲೂ ತಂಡದ ಸೋಲು-ಗೆಲುವಿನಲ್ಲಿ ಹಾಸ್ಯ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

RCB ಇನ್‌ಸೈಡರ್ ಶೋನಲ್ಲಿ ಹೊಸ ಪಾತ್ರ ಪರಿಚಯಿಸು ಆಲೋಚನೆ ಇದೆಯಾ ಅನ್ನೋ ಪ್ರಶ್ನೆಗೆ, ಎಲ್ಲವೂ ಮಾತುಕತೆಯಲ್ಲಿದೆ. ಟೂರ್ನಿ ಆರಂಭಗೊಂಡ ಮೇಲೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ನ್ಯಾಗ್ಸ್ ಹೇಳಿದ್ದಾರೆ. 

ಇದನ್ನೂ ಓದಿ: ಎಬಿಡಿ ಜೊತೆ MR.Nags ಮಾತುಕತೆ- ಸೌತ್ಆಫ್ರಿಕಾ ಕ್ರಿಕೆಟಿಗನ ನೆಚ್ಚಿನ ನಗರ ಇದು!

2018ರ ಆವೃತ್ತಿಯಲ್ಲಿ ನ್ಯಾಗ್ಸ್,RCB ತಂಡದ ಮೊಯಿನ್ ಆಲಿ, ಕ್ರಿಸ್ ವೋಕ್ಸ್ ಸಂದರ್ಶನ ನಡೆಸಿದ್ದರು. ಪೀಸ್ ಅನ್ನೋ ಟ್ಯಾಗ್ ಲೈನ್ ಮೂಲಕ RCB ಇನ್‌ಸೈಡರ್ ಶೋ ನಡೆಸುವ ನ್ಯಾಗ್ಸ್ ಈ ಭಾರಿ ಅಭಿಮಾನಿಗಳಿಗೆ ಹಲವು ಸರ್ಪ್ರೈಸ್ ನೀಡಲು ಕಾತರರಾಗಿದ್ದಾರೆ. 

ಮಿಸ್ಟರ್ ನ್ಯಾಗ್ಸ್ ಸಂದರ್ಶನವನ್ನು ಇಂಗ್ಲೀಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ: