Asianet Suvarna News Asianet Suvarna News

ರಾತ್ರಿ 8ರ ಬದಲು 7ಕ್ಕೆ ಐಪಿಎಲ್- ಮುಂಬೈ ಇಂಡಿಯನ್ಸ್ ವಿರೋಧ!

12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಹಲವು ಬದಲಾವಣೆ ಮಾಡಲು ಟೂರ್ನಿ ಪ್ರಸಾರ ಹಕ್ಕು ಹೊಂದಿರುವ ಖಾಸಗಿ ವಾಹಿನಿ ಮುಂದಾಗಿತ್ತು. ಇದರಲ್ಲಿ ಪ್ರಮುಖವಾಗಿ ರಾತ್ರಿ ಪಂದ್ಯದ ಸಮಯ ಬದಲಿಸಲು ಎಲ್ಲಾ ತಯಾರಿ ಮಾಡಿಕೊಂಡಿತ್ತು. ಆದರೆ ಮುಂಬೈ ಇಂಡಿಯನ್ಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.
 

Mumbai Indians oppose change of IPL timing from 8pm to 7pm
Author
Bengaluru, First Published Mar 14, 2019, 9:32 AM IST

ನವದೆಹಲಿ(ಮಾ.14): ಐಪಿಎಲ್‌ ಪಂದ್ಯಗಳನ್ನು ರಾತ್ರಿ 8ರ ಬದಲು 7ಕ್ಕೆ ಆರಂಭಿಸುವಂತೆ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್‌ ಸ್ಪೋಟ್ಸ್‌ರ್‍ ವಾಹಿನಿಯ ಮನವಿಯನ್ನು ಬಿಸಿಸಿಐ ತಿರಸ್ಕರಿಸಲು ಮುಂಬೈ ಇಂಡಿಯನ್ಸ್‌ ತಂಡ ಕಾರಣ ಎಂದು ತಿಳಿದುಬಂದಿದೆ. ಈ ಮೂಲಕ ಐಪಿಎಲ್ ಪಂದ್ಯದ ಸಮಯದಲ್ಲಿ ಯಾವುದೇ ಬದಲಾವಣೆ ಆಗದಂತೆ ನೋಡಿಕೊಳ್ಳುವಲ್ಲಿ ಮುಂಬೈ ಫ್ರಾಂಚೈಸಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಈ 2 IPL ತಂಡಗಳ ತವರು ಪಂದ್ಯಗಳು ಶಿಫ್ಟ್..?

ಒಂದು ಗಂಟೆ ಮೊದಲು ಆರಂಭಿಸಿದರೆ ರಾತ್ರಿ 11ರ ವೇಳೆಗೆ ಪಂದ್ಯ ಮುಕ್ತಾಯೊಳ್ಳಲಿದೆ. ಟೀವಿ ವೀಕ್ಷಕರ ಸಂಖ್ಯೆ ಕಡಿತಗೊಳ್ಳುವುದಿಲ್ಲ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಸ್ಟಾರ್‌ ವಾಹಿನಿ ಮನವಿ ಸಲ್ಲಿಸಿತ್ತು. ಆದರೆ ಮುಂಬೈ ತಂಡದ ಮಾಲೀಕರು ಪಂದ್ಯದಲ್ಲಿ ಸಮಯದಲ್ಲಿ ಬದಲಾವಣೆ ಮಾಡಬಾರದು ಎಂದು ಬಿಸಿಸಿಐ ಮೇಲೆ ಒತ್ತಡ ಹೇರಿದರು ಎನ್ನಲಾಗಿದೆ.

ಇದನ್ನೂ ಓದಿ: ಐಪಿಎಲ್ ಪಂದ್ಯದ ಸಮಯ ಬಹಿರಂಗ ಪಡಿಸಿದ ಬಿಸಿಸಿಐ!

ಫ್ರಾಂಚೈಸಿ ಒತ್ತಡಕ್ಕೆ ಮಣಿದ ಸ್ಟಾರ್ ಸ್ಪೋರ್ಟ್ ಪಂದ್ಯ ಈ ಹಿಂದಿನ ಆವೃತ್ತಿಗಳಂತೆ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ದಿನದಲ್ಲಿ 2 ಪಂದ್ಯವಿದ್ದಾಗ 4 ಗಂಟೆ ಆರಂಭವಾಗೋ ಪಂದ್ಯ ಮುಕ್ತಾಯವಾಗೋ ಮೊದಲೇ 2ನೇ ಪಂದ್ಯ ಆರಂಭಗೊಳ್ಳಲಿದೆ. ಇದರಿಂದ ಅಭಿಮಾನಿಗಳು 2ನೇ ಪಂದ್ಯದ ಆರಂಭಿಕ ಹಂತ ಅಥವಾ ಮೊದಲ ಪಂದ್ಯದ ಕೊನೆಯ ಹಂತ ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ಮುಂಬೈ ಫ್ರಾಂಚೈಸಿ ತನ್ನ ವಾದ ಮುಂದಿಟ್ಟಿತು.

Follow Us:
Download App:
  • android
  • ios