ದೆಹಲಿ(ಮಾ.20): ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಕುರಿತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಆಡಿದ ಕೊಂಕು ನುಡಿಗೆ ಮಾಜಿ ನಾಯಕ ಸೌರವ್ ಗಂಗೂಲಿ ತಿರುಗೇಟು ನೀಡಿದ್ದಾರೆ. RCB ತಂಡದ ನಾಯಕನಾಗಿ ಮುಂದುವರಿಯಲು ಕೊಹ್ಲಿ ಅರ್ಹ ಕ್ರಿಕೆಟಿಗ ಎಂದು ದಾದ ಹೇಳಿದ್ದಾರೆ.

ಇದನ್ನೂ ಓದಿ: RCB ತಂಡಕ್ಕೆ ಕೊಹ್ಲಿ ಕೃತಜ್ಞರಾಗಿರಬೇಕು: ಗಂಭೀರ್ ಕೊಂಕು ನುಡಿ

ಇಷ್ಟು ವರ್ಷ ಐಪಿಎಲ್ ಪ್ರಶಸ್ತಿ ಗೆಲ್ಲದಿದ್ದರೂ ಆರ್‌ಸಿಬಿ ತಂಡ ಕೊಹ್ಲಿಯನ್ನ ನಾಯಕನಾಗಿ ಮುಂದುವರಿಸಿದೆ. ಇದಕ್ಕೆ ಕೊಹ್ಲಿ ಆರ್‌ಸಿಬಿಗೆ ಕೃತಜ್ಞನಾಗಿರಬೇಕು ಎಂದಿದ್ದರು. ಈ ಮೂಲಕ ಕೊಹ್ಲಿ ನಾಯಕತ್ವದಲ್ಲಿ ಮುಂದುವರಿಯಲು ಸೂಕ್ತರಲ್ಲ ಎಂದು ಪರೋಕ್ಷವಾಗಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗಂಗೂಲಿ, ಕ್ರಿಕೆಟ್‌ಗೆ ಕೊಹ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಎಲ್ಲಾ ಮಾದರಿಯಲ್ಲಿ ಕೊಹ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಐಪಿಎಲ್ 2019: ಕೊಹ್ಲಿ ನಿರ್ಮಿಸಲಿದ್ದಾರೆ 5 ದಾಖಲೆ !

ಕೊಹ್ಲಿ ಚಾಂಪಿಯನ್ ಆಟಗಾರ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೊಹ್ಲಿ ಸೂಕ್ತ ನಾಯಕ ಎಂದು ಗಂಗೂಲಿ ಹೇಳಿದ್ದಾರೆ. 2019ರ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.