ದೆಹಲಿ(ಏ.26): ವಿಶ್ವಕಪ್ ಟೂರ್ನಿಗೆ ಈಗಾಗಲೇ ತಂಡಗಳು ಪ್ರಕಟಗೊಂಡಿದೆ. ಇದರ ಬೆನ್ನಲ್ಲೇ ಈ ಭಾರಿಯ ವಿನ್ನರ್ ಯಾರು? ಫೈನಲ್‌ಗೆ ಲಗ್ಗೆ ಇಡೋ ತಂಡಗಳು ಯಾವುದು ಅನ್ನೋ ಪ್ರಶ್ನೆಗಳು ಕೇಳಿಬರುತ್ತಿದೆ. ಇತ್ತ ಮಾಜಿ ಕ್ರಿಕೆಟಿಗರು, ದಿಗ್ಗಜ ಕ್ರಿಕೆಟಿಗರು ಈ ಪ್ರಶ್ನೆಗಳಿಗೆ ಉತ್ತರ ನೀಡೋ ಪ್ರಯತ್ನ ಮಾಡಿದ್ದಾರೆ. ಇದೀಗ ಸೌರವ್ ಗಂಗೂಲಿ 2019ರ ವಿಶ್ವಕಪ್ ಕುರಿತು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಗೆ ವೆಸ್ಟ್ಇಂಡೀಸ್ ತಂಡ ಪ್ರಕಟ-ಗೇಲ್, ರಸೆಲ್‌ಗೆ ಸ್ಥಾನ!

2019ರ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಡೋ ತಂಡಗಳು ಯಾವುದು  ಅನ್ನೋದನ್ನು ಸೌರವ್ ಗಂಗೂಲಿ ಭವಿಷ್ಯ ನುಡಿದಿದ್ದಾರೆ. ಭಾರತ ಸೇರಿದಂತೆ ಪಾಕಿಸ್ತಾನ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಈ ಬಾರಿಯ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಲಿದೆ ಎಂದಿದ್ದಾರೆ.

ಇದನ್ನೂ ಓದಿ: 2019ರ ವಿಶ್ವಕಪ್ ಫೈನಲ್ ಪ್ರವೇಶಿಸೋ ತಂಡ ಯಾವುದು?- ಭವಿಷ್ಯ ನುಡಿದ ದ್ರಾವಿಡ್!

ಭಾರತ ತಂಡ ಬಲಿಷ್ಠವಾಗಿದೆ. ಹೀಗಾಗಿ ಟ್ರೋಫಿ ಗೆಲುವಿನ ನೆಚ್ಚಿನ ತಂಡ.  ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ವಿದೇಶಿ ಸರಣಿಗಳಲ್ಲೂ ಯಶಸ್ಸು ಸಾಧಿಸಿದೆ. ಸೌತ್ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿದೆ. ಹೀಗಾಗಿ ವಿಶ್ವಕಪ್ ಗೆಲುವಿಗೆ ಟೀಂ ಇಂಡಿಯಾಗೆ ಅತ್ಯುತ್ತಮ ಅವಕಾಶವಿದೆ ಎಂದು ಗಂಗೂಲಿ ಹೇಳಿದ್ದಾರೆ.