ದುಬೈ[ಮಾ.11]: ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ, ಐಸಿಸಿ ಟಿ20 ರ‍್ಯಾಂಕಿಂಗ್ ಪಟ್ಟಿಯಲ್ಲಿ ವೃತ್ತಿ ಜೀವನದ ಶ್ರೇಷ್ಠ ಸ್ಥಾನಕ್ಕೇರಿದ್ದಾರೆ. 

ICC ರ‍್ಯಾಂಕಿಂಗ್‌'ನಲ್ಲಿ ಭಾರತೀಯರದ್ದೇ ದರ್ಬಾರ್..!

ಭಾನುವಾರ ನೂತನವಾಗಿ ಬಿಡುಗಡೆಯಾದ ಮಹಿಳಾ ಟಿ20 ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಮತಿ 3 ಸ್ಥಾನ ಮೇಲಕ್ಕೆ ಜಿಗಿದು 3ನೇ ರ‍್ಯಾಂಕಿಂಗ್ ಪಡೆದರು. ಏಕದಿನ ಬ್ಯಾಟರ್’ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸ್ಮತಿ ನಂ.1 ಆಗಿದ್ದಾರೆ. ಕಾಯಂ ನಾಯಕಿ ಹರ್ಮನ್‌ಪ್ರೀತ್ ಕೌರ್ ಗೈರು ಹಾಜರಿಯಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಸ್ಮತಿ ಮುನ್ನಡೆಸಿದ್ದರು.

ಐಸಿಸಿ ಮಹಿಳಾ ಏಕದಿನ ರ‍್ಯಾಂಕಿಂಗ್‌ : ಜೂಲನ್‌ ವಿಶ್ವ ನಂ.1 ಬೌಲರ್‌!

3 ಪಂದ್ಯಗಳಿಂದ ಸ್ಮತಿ 72 ರನ್ ಗಳಿಸಿದರು. ಇದರಲ್ಲಿ 1 ಅರ್ಧಶತಕ ಸೇರಿದೆ. ಹರ್ಮನ್‌ಪ್ರೀತ್ ಕೌರ್ 2 ಸ್ಥಾನ ಕುಸಿದಿದ್ದು, 9ನೇ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ರಾಧಾ ಯಾದವ್ 5ನೇ ರ‍್ಯಾಂಕಿಂಗ್ ಪಡೆದಿದ್ದರೆ, ಏಕ್ತಾ ಬಿಶ್ತ್ 56ನೇ ಸ್ಥಾನ ಪಡೆದಿದ್ದಾರೆ.