ಇಂದಿನಿಂದ ಸಿಂಗಾಪೂರ ಓಪನ್ ಬ್ಯಾಡ್ಮಿಂಟನ್; ಸೈನಾ, ಸಿಂಧು ಮೇಲೆ ಕಣ್ಣು
ಸಿಂಗಾಪೂರ ಓಪನ್ ಬ್ಯಾಡ್ಮಿಂಟನ್ ಟೂರ್ನಿ
ಹಾಲಿ ಚಾಂಪಿಯನ್ ಪಿವಿ ಸಿಂಧು ಮೇಲೆ ನಿರೀಕ್ಷೆ
ಟೂರ್ನಿಯಲ್ಲಿ ಭಾರತ ಕೇವಲ 3 ಬಾರಿ ಚಾಂಪಿಯನ್ ಆಗಿದೆ
ಸಿಂಗಾಪೂರ(ಜೂ.06): ಸಿಂಗಾಪೂರ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರ ಆರಂಭಗೊಳ್ಳಲಿದ್ದು, ಹಾಲಿ ಚಾಂಪಿಯನ್ ಪಿ.ವಿ.ಸಿಂಧು ಈ ವರ್ಷದ ಮೊದಲ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದ್ದಾರೆ. ಮಾಜಿ ಚಾಂಪಿಯನ್ ಸೈನಾ ನೆಹ್ವಾಲ್ ಕೂಡಾ ಕಣಕ್ಕಿಳಿಯಲಿದ್ದು, ಪದಕ ಬರ ನೀಗಿಸುವ ನಿರೀಕ್ಷೆಯಲ್ಲಿದ್ದಾರೆ.
ಟೂರ್ನಿಯಲ್ಲಿ ಭಾರತ ಕೇವಲ 3 ಬಾರಿ ಚಾಂಪಿಯನ್ ಆಗಿದೆ. ಮಹಿಳಾ ಸಿಂಗಲ್ಸ್ನಲ್ಲಿ 2010ರಲ್ಲಿ ಸೈನಾ, 2022ರಲ್ಲಿ ಸಿಂಧು, ಪುರುಷರ ಸಿಂಗಲ್ಸ್ನಲ್ಲಿ 2017ರಲ್ಲಿ ಸಾಯಿ ಪ್ರಣೀತ್ ಪ್ರಶಸ್ತಿ ಗೆದ್ದಿದ್ದಾರೆ. ಇತ್ತೀಚೆಗಷ್ಟೇ ಮಲೇಷ್ಯಾ ಮಾಸ್ಟರ್ಸ್ ಗೆದ್ದಿದ್ದ ಎಚ್.ಎಸ್.ಪ್ರಣಯ್, ಲಕ್ಷ್ಯ ಸೇನ್, ಕಿದಂಬಿ ಶ್ರೀಕಾಂತ್, ಪ್ರಿಯಾನ್ಶು ರಾಜಾವತ್ ಪುರುಷರ ಸಿಂಗಲ್ಸ್ನಲ್ಲಿ, ಸಾತ್ವಿಕ್-ಚಿರಾಗ್ ಪುರುಷರ ಡಬಲ್ಸ್ನಲ್ಲಿ ಆಡಲಿದ್ದಾರೆ. ಮಹಿಳಾ ಡಬಲ್ಸ್ನಲ್ಲಿ ಗಾಯತ್ರಿ-ತ್ರೀಸಾ ಕಣಕ್ಕಿಳಿಯಲಿದ್ದಾರೆ.
ವಯೋವಂಚನೆ ತಿದ್ದಲು ಶಟ್ಲರ್ಗಳಿಗೆ ಅವಕಾಶ!
ಮುಂಬೈ: ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ವಯೋ ವಂಚನೆ ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಐ) ಹೊಸ ಯೋಜನೆಯೊಂದನ್ನು ಪರಿಚಯಿಸಿದ್ದು, ಶಟ್ಲರ್ಗಳಿಗೆ ತಮ್ಮ ಜನ್ಮ ದಿನಾಂಕ, ವಯಸ್ಸು ಸರಿಪಡಿಸಲು ಕಾಲಾವಕಾಶ ನೀಡಿದೆ.
French Open 2023: ಕ್ವಾರ್ಟರ್ ಫೈನಲ್‌ಗೆ ಆಲ್ಕರಜ್, ಜಬುರ್ ಲಗ್ಗೆ
ಬಿಎಐ ಅಡಿ ನೋಂದಾಯಿಸಲ್ಪಟ್ಟಶಟ್ಲರ್ಗಳು ತಾವು ನೀಡಿದ್ದ ಮಾಹಿತಿಯಲ್ಲಿ ಏನಾದರೂ ತಪ್ಪಿದ್ದರೆ ತಿದ್ದಿಕೊಳ್ಳಲು ಜೂ.6ರಿಂದ ಜೂ.25ರ ವರೆಗೆ ಅವಕಾಶ ನೀಡಿದೆ. ಈ ಅವಧಿಯಲ್ಲಿ ಜನನ ದಿನಾಂಕ, ವಯಸ್ಸು ಬದಲಾಯಿಸಿದರೆ ಯಾವುದೇ ನಿಷೇಧ, ಅಮಾನತು ಶಿಕ್ಷೆಗೆ ಗುರಿಯಾಗುವುದಿಲ್ಲ ಎಂದಿರುವ ಬಿಎಐ, ಅವಧಿ ಮುಕ್ತಾಯಗೊಂಡ ಬಳಿಕ ಶಟ್ಲರ್ಗಳ ಮಾಹಿತಿಯಲ್ಲಿ ತಪ್ಪು ಕಂಡು ಬಂದರೆ 2 ವರ್ಷ ನಿಷೇಧ ಹೇರುವುದರ ಜೊತೆಗೆ ಎಫ್ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಸಿದೆ.
ಅಥ್ಲೆಟಿಕ್ಸ್: ಭಾರತಕ್ಕೆ 1 ಚಿನ್ನ ಸೇರಿ 6 ಪದಕ
ಯೆಕೋನ್(ಕೊರಿಯಾ): ಅಂಡರ್-20 ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತ ಸೋಮವಾರ ಒಂದು ಚಿನ್ನ ಸೇರಿ 6 ಪದಕ ಬಾಚಿಕೊಂಡಿದ್ದು, ಪದಕ ಪಟ್ಟಿಯಲ್ಲಿ ಒಟ್ಟು 9 ಪದಕಗಳೊಂದಿಗೆ 3ನೇ ಸ್ಥಾನಕ್ಕೇರಿದೆ. ಸೋಮವಾರ ಪುರುಷರ ಶಾಟ್ ಪುಟ್ನಲ್ಲಿ 17 ವರ್ಷದ ಸಿದ್ಧಾಥ್‌ರ್ ಚೌಧರಿ 19.52 ಮೀ. ದೂರಕ್ಕೆ ಎಸೆದು ಚಿನ್ನ ಗೆದ್ದರು.
ಪುರುಷರ ಜಾವೆಲಿನ್ ಎಸೆತದಲ್ಲಿ 72.34 ಮೀ. ದೂರಕ್ಕೆ ಎಸೆದ ಶಿವಂ, 3000 ಮೀ. ಸ್ಟೀಪಲ್ಚೇಸ್ನಲ್ಲಿ 8 ನಿಮಿಷ 51.74 ಸೆಕೆಂಡ್ಗಳಲ್ಲಿ ಗುರಿ ತಲುಪಿದ ಶಾರುಖ್ ಖಾನ್ ಹಾಗೂ ಲಾಂಗ್ಜಂಪ್ನಲ್ಲಿ 5.96 ಮೀ. ದೂರಕ್ಕೆ ಜಿಗಿದ ಸುಶ್ಮಿತಾ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಪುರುಷರ 800 ಮೀ. ಓಟದ ಸ್ಪರ್ಧೆಯಲ್ಲಿ ಶಕೀಲ್ 1 ನಿಮಿಷ 49.79 ಸೆಕೆಂಡ್ಗಳಲ್ಲಿ ಗುರಿ ತಲುಪಿ ಕಂಚಿಗೆ ತೃಪ್ತಿಪಟ್ಟುಕೊಂಡರೆ, 4ಗಿ 400 ಮೀ. ಮಿಶ್ರ ತಂಡ ವಿಭಾಗದಲ್ಲಿ ಭಾರತ ಕಂಚಿನ ಪದಕ ಜಯಿಸಿತು. ಮೊದಲ ದಿನ ಭಾರತ 2 ಚಿನ್ನ, 1 ಕಂಚು ಗೆದ್ದಿತ್ತು.
ಶೂಟಿಂಗ್ ವಿಶ್ವಕಪ್: ಚಿನ್ನ ಗೆದ್ದ ಭಾರತದ ಧನುಶ್
ಸಹ್‌್ಲ(ಜರ್ಮನಿ): ಯುವ ಶೂಟರ್ ಧನುಶ್ ಶ್ರೀಕಾಂತ್ ಇಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಕಿರಿಯರ ವಿಶ್ವಕಪ್ನಲ್ಲಿ ಭಾರತಕ್ಕೆ 3ನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಸೋಮವಾರ ಪುರುಷರ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಧನುಶ್, ಸ್ವೀಡನ್ ಹಾಗೂ ಫ್ರಾನ್ಸ್‌ನ ಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದರು. ಭಾನುವಾರ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಗೌತಮಿ ಭಾನೋಟ್ ಹಾಗೂ ಅಭಿನವ್ ಶಾ ಚಿನ್ನ ಗೆದ್ದಿದ್ದರು. ಕೂಟದ ಮೊದಲ ದಿನ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಸೈನ್ಯಂ ಸ್ವರ್ಣ ಸಾಧನೆ ಮಾಡಿದ್ದರು.