ಕಾಶ್ಮೀರ ವಿಚಾರ ಕೆದಕಿದ ಮಲಾಲಾಗೆ ಶೂಟರ್ ಹೀನಾ ತಿರುಗೇಟು!
ಕಾಶ್ಮೀರದ ಪರಿಸ್ಥಿತಿ ಹದಗೆಟ್ಟಿದೆ ಎಂದು ಟ್ವೀಟ್ ಮೂಲಕ ಭಾರತವನ್ನು ಕೆಣಕಲು ಪ್ರಯತ್ನಿಸಿದ ಪಾಕಿಸ್ತಾನ ಶಾಂತಿ ಧೂತೆ ಮಲಾಲ ಯೂಸುಫ್‌ಗೆ, ಶೂಟರ್ ಹೀನಾ ಸಿಧು ತಕ್ಕ ಉತ್ತರ ನೀಡಿದ್ದಾರೆ.
ಲುಧಿಯಾನ(ಸೆ.17): ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನ ಮಾನ(ಆರ್ಟಿಕಲ್ 370) ರದ್ದು ಮಾಡಿದ ಬಳಿಕ ಪಾಕಿಸ್ತಾನ ಹತಾಶೆಗೊಂಡಿದೆ. ಹಲವು ಪಾಕಿಸ್ತಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಹಾಗೂ ಪಾಕಿಸ್ತಾನಿ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸುಫ್ ಕೂಡ ಸರಣಿ ಟ್ವೀಟ್ ಮೂಲಕ ಗಮನಸೆಳೆಯುವ ಪ್ರಯತ್ನ ಮಾಡಿದ್ದಾಳೆ. ಇದೀಗ ಯುಸೂಫ್‌ಗೆ ಭಾರತೀಯ ಶೂಟರ್ ಹೀನಾ ಸಿಧು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಕಾಶ್ಮೀರಿ ಮಕ್ಕಳು ಶಾಲೆಗೆ ಹೋಗಲಿ ಎಂದ ಮಲಾಲ: ಶೋಭಾ ಸವಾಲಿಗೆ ವಿಲವಿಲ!
ಕಾಶ್ಮೀರ ಪರಿಸ್ಥಿತಿ ಕುರಿತು ಮಲಾಲ ಟ್ವೀಟ್ ಮಾಡಿ ಭಾರತವನ್ನು ಕೆಣಕೋ ಪ್ರಯತ್ನ ಮಾಡಿದ್ದರು. ನನಗೆ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆಗಸ್ಟ್ 12ರಂದು ನಾನು ಪರೀಕ್ಷೆಯನ್ನು ಮಿಸ್ ಮಾಡಿಕೊಂಡೆ. ನನ್ನ ಭವಿಷ್ಯಕ್ಕೆ ಯಾವುದೇ ಸುರಕ್ಷತೆ ಇಲ್ಲ ಎಂದು ನನಗನಿಸುತ್ತಿದೆ. ನಾನು ಬರಹಗಾರ್ತಿಯಾಗಬೇಕು, ಸ್ವತಂತ್ರವಾಗಿ ಬದುಕು ರೂಪಿಸಬೇಕು. ಯಶಸ್ವಿ ಕಾಶ್ಮೀರಿ ಮಹಿಳೆ ಎಂದು ಗುರುತಿಸಿಕೊಳ್ಳಬೇಕು. ಆದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ ಎಂದು ಮಲಾಲ ಕಾಶ್ಮೀರ ಹುಡುಗಿಯ ಮನದಾಳ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಏಷ್ಯನ್ ಗೇಮ್ಸ್: ಹೀನಾ ಸಿಧುಗೆ ಒಲಿದ ಕಂಚು
ಈ ಟ್ವೀಟ್‌ಗೆ ಹೀನಾ ಸಿಧು ತಕ್ಕ ಉತ್ತರ ನೀಡಿದ್ದಾರೆ. ನಿಮ್ಮ ಉದ್ದೇಶ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಬೇಕು, ಕಾರಣ ನೀವು ಪಡೆದ ರೀತಿಯ ಉತ್ತಮ ಶಿಕ್ಷಣಕ್ಕಾಗಿ ಅನ್ನೋದು ನಿಮ್ಮ ವಾದ. ನೆನಪಿರಲಿ ನೀವು ಕೂದಲೆಳೆಯುವ ಅಂತರದಲ್ಲಿ ಸಾವಿನಿಂದ ಪಾರಾಗಿ, ಪಾಕಿಸ್ತಾನ ಬಿಟ್ಟು ಓಡಿ ಹೋಗಿದ್ದೀರಿ. ಬಳಿಕ ಪಾಕಿಸ್ತಾನಕ್ಕೆ ಮರಳಲೇ ಇಲ್ಲ. ಪಾಕ್ ಶಾಂತಿಯುತವಾಗಿದೆ ಎಂದು ನಮಗೆ ತೋರಿಸಲು ನೀವು ಯಾಕೆ ಪಾಕಿಸ್ತಾನಕ್ಕೆ ಮರಳಬಾರದು ಎಂದು ಹೀನಾ ಟ್ವೀಟ್ ಮಾಡಿದ್ದಾರೆ.