ಏಷ್ಯನ್ ಗೇಮ್ಸ್: ಹೀನಾ ಸಿಧುಗೆ ಒಲಿದ ಕಂಚು
ತೀವ್ರ ಪೈಪೂಟಿಯಿಂದ ಕೂಡಿದ್ದ ಶೂಟಿಂಗ್’ನಲ್ಲಿ ಕೇವಲ ಕೂದಲೆಳೆ ಅಂತರದಲ್ಲಿ ಸಿಧು ಬೆಳ್ಳಿ ಪದಕದಿಂದ ವಂಚಿತರಾದರು. ಇನ್ನು ಇದೇ ಸ್ಪರ್ಧೆಯಲ್ಲಿ ಫೈನಲ್’ಗೆ ಲಗ್ಗೆಯಿಟ್ಟಿದ್ದ ಮನು ಬಾಕರ್ ಪದಕ ಗೆಲ್ಲಲು ಮತ್ತೊಮ್ಮೆ ವಿಫಲರಾಗಿದ್ದಾರೆ.
ಜಕಾರ್ತ[ಆ.24]: ಭಾರತದ ಅನುಭವಿ ಶೂಟರ್ ಹೀನಾ ಸಿಧು 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. I ಈ ಮೂಲಕ ಭಾರತದ ಶೂಟರ್’ಗಳ ಪದಕಗಳ ಬೇಟೆ ಮುಂದುವರೆದಿದೆ.
ತೀವ್ರ ಪೈಪೂಟಿಯಿಂದ ಕೂಡಿದ್ದ ಶೂಟಿಂಗ್’ನಲ್ಲಿ ಕೇವಲ ಕೂದಲೆಳೆ ಅಂತರದಲ್ಲಿ ಸಿಧು ಬೆಳ್ಳಿ ಪದಕದಿಂದ ವಂಚಿತರಾದರು. ಇನ್ನು ಇದೇ ಸ್ಪರ್ಧೆಯಲ್ಲಿ ಫೈನಲ್’ಗೆ ಲಗ್ಗೆಯಿಟ್ಟಿದ್ದ ಮನು ಬಾಕರ್ ಪದಕ ಗೆಲ್ಲಲು ಮತ್ತೊಮ್ಮೆ ವಿಫಲರಾಗಿದ್ದಾರೆ.
A great fight @HeenaSidhu10. Compliments
— Abhinav Bindra OLY (@Abhinav_Bindra) August 24, 2018
ಕೊನೆಯ ಶೂಟ್’ನಲ್ಲಿ 9.6 ಅಂಕ ಕಲೆಹಾಕಿದ ಸಿದು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಈ ಪದಕದೊಂದಿಗೆ ಸಿದು ಒಟ್ಟಾರೆ ಏಷ್ಯನ್ ಗೇಮ್ಸ್’ನಲ್ಲಿ ಮೂರನೇ ಪದಕ ಗೆದ್ದಂತಾಗಿದೆ.