ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಪ್ರಕಟಿಸಿದ ಆಫ್ರಿದಿ; ನಾಲ್ವರಲ್ಲಿ ಒರ್ವ ಭಾರತೀಯನಿಗೆ ಸ್ಥಾನ !
ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಹಾಲಿ ಕ್ರಿಕೆಟಿಗರಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್ ಯಾರು ಅನ್ನೋದನ್ನು ಪ್ರಕಟಿಸಿದ್ದಾರೆ. ಅಫ್ರಿದಿ ಪ್ರಕಟಿಸಿದ ಹೆಸರಲ್ಲಿ ಒರ್ವ ಟೀಂ ಇಂಡಿಯಾ ಆಟಗಾರ ಸ್ಥಾನ ಪಡೆದಿದ್ದಾರೆ.
ಇಸ್ಲಾಮಾಬಾದ್(ಸೆ.21): ಹಾಲಿ ಕ್ರಿಕೆಟಿಗರ ಪೈಕಿ ಅತ್ಯುತ್ತಮ ಬ್ಯಾಟ್ಸ್‌ಮನ್ ಯಾರು ಅನ್ನೋ ಚರ್ಚೆ ಜೋರಾಗಿ ನಡೆಯುುತ್ತಿದೆ. ಹಲವು ದಿಗ್ಗಜ ಕ್ರಿಕೆಟಿಗರು, ವಿಶ್ಲೇಷಕರು ಉತ್ತರ ಕಂಡು ಹಿಡಿಯುವ ಪ್ರಯತ್ನ ನಡೆಸಿದ್ದಾರೆ. ಇದೀಗ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ನಾಲ್ವರು ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಆದರೆ ನಾಲ್ವರಲ್ಲಿ ಕೇವಲ ಒರ್ವ ಭಾರತೀಯನಿಗೆ ಮಾತ್ರ ಸ್ಥಾನ ನೀಡಲಾಗಿದೆ.
ಇದನ್ನೂ ಓದಿ: #INDvSA ಬೆಂಗಳೂರು ಪಂದ್ಯ; ಮಳೆ ಬರುತ್ತಾ? ಬಿಸಿಲು ಇರುತ್ತಾ?
ಶಾಹಿದ್ ಆಫ್ರಿದಿಗೆ ಟ್ವಿಟರ್ ಮೂಲಕ ಅಭಿಮಾನಿಯೋರ್ವ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಫ್ರಿದಿ, ವಿರಾಟ್ ಕೊಹ್ಲಿ, ಪಾಕಿಸ್ತಾನದ ಬಾಬರ್ ಅಜಮ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ಇಂಗ್ಲೆಂಡ್‌ನ ಜೋ ರೂಟ್ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಅಫ್ರಿದಿ ಹೇಳಿದ್ದಾರೆ.
ಇದನ್ನೂ ಓದಿ: #INDvSA 2ನೇ ಟಿ20: ರೋಹಿತ್ ದಾಖಲೆ ಮುರಿದ ಕೊಹ್ಲಿ!
ಕೊಹ್ಲಿ ಹಾಗೂ ಬಾಬರ್ ಅಜಮ್ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದಾದರೆ ಯಾರು ಅನ್ನೋ ಪ್ರಶ್ನೆಗೆ ಅಫ್ರಿದಿ ಉತ್ತರಿಸಲು ನಿರಾಕರಿಸಿದ್ದಾರೆ. ಆದರೆ ಆಫ್ರಿದಿ ಆಯ್ಕೆ ಮಾಡಿಗ ನಾಲ್ವರಲ್ಲಿ ಕೇವಲ ಒರ್ವ ಟೀಂ ಇಂಡಿಯಾ ಆಟಗಾರ ಸ್ಥಾನ ಪಡಿದಿದ್ದಾರೆ.