ಮೊಹಾಲಿ(ಸೆ.18): ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ವಿರಾಟ್ ಕೊಹ್ಲಿ ಅಜೇಯ 72 ರನ್ ಸಿಡಿಸೋ ಮೂಲಕ ಭಾರತ ಇನ್ನೂ 1 ಓವರ್ ಬಾಕಿ ಇರುವಂತೆ ಗೆಲುವಿನ ದಡ ಸೇರಿತು. ಮೊಹಾಲಿಯಲ್ಲಿ ವಿರಾಟ್ ಕೊಹ್ಲಿ ಅಬ್ಬರಕ್ಕೆ ಟಿ20ಯಲ್ಲಿ ದಾಖಲೆ ನಿರ್ಮಾಣವಾಗಿದೆ. ಇಷ್ಟೇ ಅಲ್ಲ ರೋಹಿತ್ ಹೆಸರಿನಲ್ಲಿದ್ದ ರೆಕಾರ್ಡ್ ಇದೀಗ ಕೊಹ್ಲಿ ಪಾಲಾಗಿದೆ.

ಇದನ್ನೂ ಓದಿ: INDvSA ಕೊಹ್ಲಿ ಅರ್ಧಶತಕ; ಮೊಹಾಲಿಯಲ್ಲಿ ನಲಿದಾಡಿದ ಭಾರತ!

2ನೇ ಚುಟುಕು ಸಮರದಲ್ಲಿ ಕೊಹ್ಲಿ 52 ಎಸೆತದಲ್ಲಿ 4 ಬೌಂಡರಿ ಹಾಗೂ 3  ಸಿಕ್ಸರ್ ನೆರವಿನಿಂದ ಅಜೇಯ 72 ರನ್ ಚಚ್ಚಿದರು. ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಈ ಅದ್ಭುತ ಬ್ಯಾಟಿಂಗ್ ಪ್ರದರ್ಶನದ  ಮೂಲಕ ರೋಹಿತ್ ಶರ್ಮಾ ದಾಖಲೆ ಮುರಿದಿದ್ದಾರೆ.  ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್‌ಮನ್ ಅನ್ನೋ ದಾಖಲೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಕೊಹ್ಲಿ ಇದೀಗ 2440 ರನ್ ಸಿಡಿಸಿದ್ದಾರೆ. ರೋಹಿತ್ ಶರ್ಮಾಗಿಂತ 6 ರನ್‌ಗಳಿಂದ ಮುಂದಿದ್ದಾರೆ.

ಇದನ್ನೂ ಓದಿ: 2020ರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಮುಂದಿರುವ ಸವಾಲುಗಳೇನು..?

ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸರದಾರರು:
2440 ವಿರಾಟ್ ಕೊಹ್ಲಿ
2434 ರೋಹಿತ್ ಶರ್ಮಾ
2283 ಮಾರ್ಟಿನ್ ಗಪ್ಟಿಲ್
2263 ಶೋಯಿಬ್ ಮಲ್ಲಿಕ್
2140 ಬ್ರೆಂಡನ್ ಮೆಕ್ಕಲಂ