ಬೆಂಗಳೂರು(ಸೆ.21): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ  3ನೇ ಹಾಗೂ ಅಂತಿಮ ಟ20 ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಕೊಹ್ಲಿ ಪಡೆಗೆ ಸರಣಿ ಗೆಲುವಿನ ತವಕ. ಇತ್ತ ಸೌತ್ ಆಫ್ರಿಕಾ ಸರಣಿ ಸಮಬಲ ಮಾಡಿಕೊಳ್ಳಲು ತಯಾರಾಗಿದೆ. ಈ ಮಹತ್ವದ ಪಂದ್ಯಕ್ಕೆ ಇದೀಗ ಆತಂಕ ಎದುರಾಗಿದೆ.

ಇದನ್ನೂ ಓದಿ: ಅಂತಿಮ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ..?

ಧರ್ಮಶಾಲಾ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಪಂದ್ಯ ಫಲಿತಾಂಶ ಕಾಣದೆ  ರದ್ದಾಗಿತ್ತು. ಇದೀಗ ಬೆಂಗಳೂರು ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಸೆ.22 ರಂದು ನಡೆಯಲಿರುವ ಬೆಂಗಳೂರು ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಎಂದು ಹವಾಮಾನ ವರದಿ ಹೇಳುತ್ತಿದೆ. 

ಇದನ್ನೂ ಓದಿ: ಚಿನ್ನಸ್ವಾಮಿಗಿಲ್ಲ ಇನ್ನು ವರುಣನ ಕಾಟ

ಭಾನುವಾರ ಬೆಂಗಳೂರಲ್ಲಿ  ಗುಡುಗು ಸಹಿತ ತುಂತುರ ಮಳೆಯಾಗಲಿದೆ ಅನ್ನೋ ಹವಾಮಾನ ವರದಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಲ್ಲಿ ವಿಶ್ವದರ್ಜೆಯ ಸಬ್ ಏರ್ ಸಿಸ್ಟಮ್ ಇರುವುದರಿಂದ ಅದೆಷ್ಟೇ ಮಳೆ ಸುರಿದರೂ 5 ನಿಮಿಷದಲ್ಲಿ ಮೈದಾನದವನ್ನು ಆಟಕ್ಕೆ ಸಜ್ಜುಗೊಳಿಸುವ ವ್ಯವಸ್ಥೆ ಇದೆ. ಆದರೆ ಮಳೆ ಅನುವು ಮಾಡಿಕೊಡಬೇಕು ಅಷ್ಟೆ.