ಇಂದಿನಿಂದ 3 ದಿನ ಬೆಂಗಳೂರಿನಲ್ಲಿ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್
ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಹಾಗೂ ಕರ್ನಾಟಕ ಕುಸ್ತಿ ಸಂಸ್ಥೆ ಜಂಟಿಯಾಗಿ ಕೂಟ ಆಯೋಜಿಸುತ್ತಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು: ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್ ಆಯೋಜನೆಗೆ ಕರ್ನಾಟಕ ಸಜ್ಜಾಗಿದೆ. ನಗರದ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಕೂಟ ಆರಂಭಗೊಳ್ಳಲಿದ್ದು, ಡಿ.8ರ ವರೆಗೂ ನಡೆಯಲಿದೆ.
ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಹಾಗೂ ಕರ್ನಾಟಕ ಕುಸ್ತಿ ಸಂಸ್ಥೆ ಜಂಟಿಯಾಗಿ ಕೂಟ ಆಯೋಜಿಸುತ್ತಿವೆ. 3 ದಿನಗಳ ಚಾಂಪಿಯನ್‌ಶಿಪ್‌ನಲ್ಲಿ ಹರ್ಯಾಣ, ಮಣಿಪುರ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ 24 ರಾಜ್ಯ ಸಂಸ್ಥೆಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 700ಕ್ಕೂ ಹೆಚ್ಚು ಕುಸ್ತಿಪಟುಗಳು ಕಣಕ್ಕಿಳಿಯಲಿದ್ದಾರೆ. ಆದರೆ ರೈಲ್ವೇಸ್ ಕುಸ್ತಿಪಟುಗಳು ತಮ್ಮ ತಮ್ಮ ರಾಜ್ಯ ತಂಡಗಳನ್ನು ಪ್ರತಿನಿಧಿಸಲಿದ್ದಾರೆ. ಗ್ರೀಕೊ ರೋಮನ್, ಪುರುಷ ಹಾಗೂ ಮಹಿಳೆಯರ ಫ್ರೀಸ್ಟೈಲ್ ಸೇರಿ ಒಟ್ಟು 3 ವಿಭಾಗಗಳ ತಲಾ 10ರಂತೆ ಒಟ್ಟು 30 ತೂಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಕರ್ನಾಟಕದ 32 ರೆಸ್ಲರ್‌ಗಳು ಕಣಕ್ಕೆ
ಕೂಟದಲ್ಲಿ ಆತಿಥೇಯ ಕರ್ನಾಟಕದ 32 ಕುಸ್ತಿಪಟುಗಳು ಗ್ರೀಕೊ ರೋಮನ್, ಪುರುಷ ಹಾಗೂ ಮಹಿಳೆಯರ ಫ್ರೀಸ್ಟೈಲ್ ವಿಭಾಗಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಗೋಪಾಲ್ ಕೋಲಿ, ಮಹೇಶ್ ಗೌಡ, ಶ್ವೇತಾ ಸಂಜು ಅನ್ನಿಕೇರಿ ಪದಕ ಗೆಲ್ಲುವ ನೆಚ್ಚಿನ ರೆಸ್ಲರ್‌ಗಳಾಗಿ ಗುರುತಿಸಿಕೊಂಡಿದ್ದಾರೆ.
ಗೆಳೆಯ ಸಚಿನ್‌ನಿಂದ ನಿರಾಸೆಗೊಂಡ ಕಾಂಬ್ಳಿ ನೆರವಿಗೆ ನಿಂತ ವಿಶ್ವಕಪ್ ವಿಜೇತ ನಾಯಕ!
ಉಚಿತ ಪ್ರವೇಶ
ಚಾಂಪಿಯನ್‌ಶಿಪ್ ವೇಳೆ ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಉಚಿತ ಪ್ರವೇಶವಿದೆ. ಕ್ರೀಡಾಸಕ್ತರು ಯಾವುದೇ ಶುಲ್ಕವಿಲ್ಲದೆ ಕ್ರೀಡಾಂಗಣಕ್ಕೆ ತೆರಳಿ ನೇರವಾಗಿ ಪಂದ್ಯ ವೀಕ್ಷಿಸಬಹುದು.
ವಿಶ್ವ ಚೆಸ್: ಲಿರೆನ್ ವಿರುದ್ಧ ಮತ್ತೆ ಡ್ರಾಗೆ ತೃಪ್ತಿಪಟ್ಟ ಗುಕೇಶ್
ಸಿಂಗಾಪುರ: ಭಾರತದ ಗ್ರಾಂಡ್ ಮಾಸ್ಟರ್ ಡಿ.ಗುಕೇಶ್ ಹಾಗೂ ಹಾಲಿ ಚಾಂಪಿಯನ್, ಚೀನಾದ ಡಿಂಗ್ ಲಿರನ್ ನಡುವಿನ ವಿಶ್ವ ಚೆಸ್ ಚಾಂಪಿಯನ್ ಫೈನಲ್‌ನ ಮತ್ತೊಂದು ಗೇಮ್ ಡ್ರಾದಲ್ಲಿ ಅಂತ್ಯಗೊಂಡಿದೆ. ಗುರುವಾರ ನಡೆದ 9ನೇ ಸುತ್ತಿನ ಪಂದ್ಯವನ್ನು 54 ನಡೆಗಳ ಬಳಿಕ ಡ್ರಾಗೊಳಿಸಲು ಇಬ್ಬರು ನಿರ್ಧರಿಸಿದರು.
ಭಾರತ-ಆಸೀಸ್ 2ನೇ ಟೆಸ್ಟ್: ಪಿಂಕ್ ಬಾಲ್ ಚಾಲೆಂಜ್‌ಗೆ ಟೀಂ ಇಂಡಿಯಾ ರೆಡಿ
ಇದು ಸತತ 6ನೇ ಹಾಗೂ ಒಟ್ಟಾರೆ 7ನೇ ಸುತ್ತಿನಲ್ಲಿ ಲಿರೆನ್, 3ನೇ ಸುತ್ತಿನಲ್ಲಿ ಗುಕೇಶ್ ಗೆದ್ದಿದ್ದರು. ಉಳಿದ ಪಂದ್ಯ ಗಳು ಡ್ರಾಗೊಂಡಿವೆ. ಸದ್ಯ ಇಬ್ಬರ ಅಂಕಗಳೂ 4.5-4.5ರಲ್ಲಿ ಸಮಬಲ ಗೊಂಡಿವೆ. ಇನ್ನೂ 5 ಸುತ್ತು ಬಾಕಿ ಇದೆ. ಶುಕ್ರವಾರ ವಿಶ್ರಾಂತಿ ದಿನ.