ಗೆಳೆಯ ಸಚಿನ್‌ನಿಂದ ನಿರಾಸೆಗೊಂಡ ಕಾಂಬ್ಳಿ ನೆರವಿಗೆ ನಿಂತ ವಿಶ್ವಕಪ್ ವಿಜೇತ ನಾಯಕ!

ಇತ್ತೀಚೆಗೆ ಸಚಿನ್ ತೆಂಡೂಲ್ಕರ-ವಿನೋದ್ ಕಾಂಬ್ಳಿ ಭೇಟಿ ವಿಡಿಯೋ ಕೆಲ ವಿವಾದ ಸೃಷ್ಟಿಸಿತ್ತು. ಸಚಿನ್‌ನಿಂದ ನಿರಾಸೆಗೊಂಡಿದ್ದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿಗೆ ಇದೀಗ ವಿಶ್ವಕಪ್ ವಿಜೇತ ನಾಯಕ ನೆರವಿನ ಹಸ್ತ ಚಾಚಿದ್ದಾರೆ.
 

Kapil dev offers financial help for vindo kambli treatment after sachin kambli video row ckm

ಮುಂಬೈ(ಡಿ.06)  ಬಾಲ್ಯದಲ್ಲಿ ಆಪ್ತ ಗೆಳೆಯರಾಗಿದ್ದ ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಇತ್ತೀಚೆಗೆ ಒಂದೇ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಒಂದೇ ವೇದಿಕೆಯ ಬದಿಯಲ್ಲಿ ಕುಳಿತಿದ್ದ ವಿನೋದ್ ಕಾಂಬ್ಳಿಯನ್ನು ಸಚಿನ್ ತೆಂಡೂಲ್ಕರ್ ಭೇಟಿಯಾಗಿ ಮಾತನಾಡಿದ್ದರು. ಆದರೆ ಈ ವಿಡಿಯೋ ಕೆಲ ವಿವಾದಕ್ಕೆ ಕಾರಣವಾಗಿತ್ತು. ವಿನೋದ್ ಕಾಂಬ್ಳಿ ಮನವಿಯನ್ನು ಸಚಿನ್ ಪುರಸ್ಕರಿಸಿಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು. ವಿವಾದ ಏನೇ ಇದ್ದರೂ ವೇದಿಕೆಯಲ್ಲಿ ವಿನೋದ್ ಕಾಂಬ್ಳಿ ನಿರಾಸೆಗೊಂಡಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿತ್ತು. ಆದರೆ ಈ ವಿಡಿಯೋ ಎಲ್ಲೆಡೆ ಹರಿದಾಡಿದ ಬೆನ್ನಲ್ಲೇ 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಇದೀಗ ಕಾಂಬ್ಳಿ ನೆರವಿಗೆ ಆಗಮಿಸಿದ್ದಾರೆ.

ಸಚಿನ್ ತನ್ನ ಪಕ್ಕದಲ್ಲಿ ಕುಳಿತಿಕೊಂಡಿಲ್ಲ, ಹೆಚ್ಚು ಹೊತ್ತು ಮಾತನಾಡಿಲ್ಲ ಎಂದು ನಿರಾಸೆಗೊಂಡಿದ್ದ ವಿನೋದ್ ಕಾಂಬ್ಳಿಗೆ ಇದೀಗ ಕಪಿಲ್ ದೇವ್ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ವಿನೋದ್ ಕಾಂಬ್ಳಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತೀವ್ರ ಕುಡಿತದ ಚಟ, ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಿನೋದ್ ಕಾಂಬ್ಳಿ ಆರ್ಥಿಕವಾಗಿಯೂ ಕುಗ್ಗಿ ಹೋಗಿದ್ದಾರೆ. ಇದೀಗ ಸರಿಯಾಗಿ ಚಿಕಿತ್ಸೆ ಪಡೆಯಲು ಹಣವಿಲ್ಲದ ಪರಿಸ್ಥಿತಿ ತಲುಪಿದ್ದಾರೆ. ಈ ರೀತಿಯ ಪರಿಸ್ಥಿತಿ ಎದುರಿಸುತ್ತಿರುವದು ಮೊದಲೇನಲ್ಲ. ಇದೀಗ ವಿನೋದ್ ಕಾಂಬ್ಳಿಯ ಚಿಕಿತ್ಸೆಗೆ ನೆರವು ನೀಡುವುದಾಗಿ ಕಪಿಲ್ ದೇವ್ ಹೇಳಿದ್ದಾರೆ. 

ಮೂಲೆಯಲ್ಲಿ ಕುಳಿತಿದ್ದ ಕಾಂಬ್ಳಿ ಭೇಟಿಯಾಗಿ ಗೆಳೆಯನ ಮನವಿ ತಿರಸ್ಕರಿಸಿದ್ರಾ ತೆಂಡೂಲ್ಕರ್?

ಸಚಿನ್ ಹಾಗೂ ಕಾಂಬ್ಳಿ ಭೇಟಿ ವಿಡಿಯೋದಲ್ಲಿ ವಿನೋದ್ ಕಾಂಬ್ಳಿ ಎದ್ದು ನಡೆಯಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿರುವದು ಸ್ಪಷ್ಟವಾಗಿದೆ. ಮಾತುಗಳು ತೊದಲುತ್ತಿದೆ. ಕೈ ಕಾಲುಗಳು ಶಕ್ತಿ ಕಳೆದುಕೊಂಡಿದೆ. ಹೀಗಾಗಿ ವಿನೋದ್ ಕಾಂಬ್ಳಿಗೆ ನೆರವು ನೀಡುವುದಾಗಿ ಹೇಳಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ವೇಗಿ ಸಂಧು ಬಹಿರಂಗಪಡಿಸಿದ್ದಾರೆ. ಆದರೆ ಒಂದು ಕಂಡೀಷನ್ ಹಾಕಿದ್ದಾರೆ ಎಂದು ಸಂಧು ಹೇಳಿದ್ದಾರೆ. ವಿನೋದ್ ಕಾಂಬ್ಳಿ ಚಿಕಿತ್ಸೆ ಪಡೆಯಲು ಬಯಸ್ಸಿದ್ದರೆ ಹಾಗೂ ಕುಡಿತದ ಚಟ ಬಿಟ್ಟರೆ ಚಿಕಿತ್ಸೆಯ ಎಲ್ಲಾ ವೆಚ್ಚ ಭರಿಸುವುದಾಗಿ ಹೇಳಿದ್ದಾರೆ ಎಂದು ಸಂಧು ಹೇಳಿದ್ದಾರೆ.

ಇತ್ತಿಚೆಗೆ ಮುಂಬೈನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್ ಮೆಮೋರಿಯಲ್ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಚಿನ್ ತೆಂಡೂಲ್ಕರ್ ಮುಖ್ಯ ಅತಿಥಿಯಾಗಿದ್ದರು. ಇನ್ನು ಎಂಎನ್‌ಎಸ್ ನಾಯಕ ರಾಜ್ ಠಾಕ್ರೆ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.  ಇದೇ ಕಾರ್ಯಕ್ರಮಕ್ಕೆ ವಿನೋದ್ ಕಾಂಬ್ಳಿಯನ್ನು ಆಹ್ವಾನಿಸಲಾಗಿತ್ತು.  

 

 

ವೇದಿಕೆಯ ಮಧ್ಯಭಾಗದಲ್ಲಿ ಸಚಿನ್ ಕುಳಿತಿದ್ದರೆ ಇತ್ತ ಬದಿಯಲ್ಲಿ ವಿನೋದ್ ಕಾಂಬ್ಳಿ ಕುಳಿತಿದ್ದರು. ಕಾಂಬ್ಳಿ ಬಳಿ ಬಂದ ಸಚಿನ್ ತೆಂಡೂಲ್ಕರ್ ಬಾಲ್ಯದ ಗೆಳೆಯನ ಮಾತನಾಡಿಸಿದ್ದರು. ಸಚಿನ್ ಗುರುತುಹಿಡಿಯಲು ಕೆಲ ಹೊತ್ತು ತೆಗೆದುಕೊಂಡು ವಿನೋದ್ ಕಾಂಬ್ಳಿ ಬಳಿಕ ಪುಳಕಿತರಾಗಿದ್ದರು. ಸಚಿನ್ ಕೈ ಗಟ್ಟಿಯಾಗಿ ಹಿಡಿದು ಇಲ್ಲೇ ಕುಳಿತುಕೊಳ್ಳುವಂತೆ ಮನವಿ ಮಾಡಿದ್ದರು. ಇದೇ ವೇಳೆ ಕಾರ್ಯಕ್ರಮ ಆಯೋಜಕರು ಆಗಮಿಸಿದ್ದರು. ಇತ್ತ ಸಚಿನ್ ತೆಂಡೂಲ್ಕರ್, ಗೆಳೆಯ ವಿನೋದ್ ಕಾಂಬ್ಳಿಯಿಂದ ಕೈ ಬಿಡಿಸಿಕೊಂಡು ತಮ್ಮ ಆಸನದತ್ತ ತೆರಳಿದ್ದರು. ಕಾರ್ಯಕ್ರಮ ಆಯೋಜಕರು ವಿನೋದ್ ಕಾಂಬ್ಳಿ ಮನ ಒಲಿಸುವ ಪ್ರಯತ್ನ ಮಾಡಿದ್ದರು. ಆದರೆ ಸಚಿನ್ ತೆರಳುತ್ತಿದ್ದಂತೆ ವಿನೋದ್ ಕಾಂಬ್ಳಿ ನಿರಾಸೆಗೊಂಡಿದ್ದರು. ಸಚಿನ್ ಪಕ್ಕದಲ್ಲಿ ಕುಳಿತುಕೊಳ್ಳುವಂತೆ ಹಠ ಹಿಡಿದು ನಿರಾಸೆಗೊಂಡ ವಿಡಿಯೋ ವಿವಾದಕ್ಕೂ ಕಾರಣವಾಗಿತ್ತು. ಆದರೆ ಸಚಿನ್ ತೆಂಡೂಲ್ಕರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕಾರಣ ತನ್ನ ಜವಾಬ್ದಾರಿ ನಿರ್ವಹಿಸಲು ತಾವು ಕುಳಿತಿದ್ದ ಆಸನದತ್ತ ವಾಪಸ್ ತೆರಳಿದ್ದರು. ಸಚಿನ್ ಪಕ್ಕ ರಾಜ್ ಠಾಕ್ರೆ ಸೇರಿದಂತೆ ಇತರ ಕೆಲ ಗಣ್ಯರು ಕುಳಿತಿದ್ದರು.
 

Latest Videos
Follow Us:
Download App:
  • android
  • ios