ಶ್ರೀಲಂಕಾ ಮಾಜಿ ನಾಯಕ ಸನತ್ ಜಯಸೂರ್ಯ ಪುತ್ರನ ಕ್ರಿಕೆಟ್ ಕೌಶಲ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವತಃ ಸನತ್ ಜಯಸೂರ್ಯ ಬೌಲಿಂಗ್‌ನಲ್ಲಿ ಜ್ಯೂನಿಯಲ್ ಜಯಸೂರ್ಯ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.  ಸೀನಿಯರ್ ಹಾಗೂ ಜ್ಯೂನಿಯರ್ ಜಯಸೂರ್ಯ ಪ್ರದರ್ಶನ ಹೇಗಿದೆ ಇಲ್ಲಿದೆ.

ಕೊಲಂಬೊ(ಜು.31): ಕ್ರಿಕೆಟ್‌ನಲ್ಲೀಗ ದಿಗ್ಗಜ ಕ್ರಿಕೆಟಿಗರ ಪುತ್ರರ ಸದ್ದು ಜೋರಾಗುತ್ತಿದೆ. ಇತ್ತೀಚೆಗಷ್ಟೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ, ಅರ್ಜುನ್ ತೆಂಡೂಲ್ಕರ್, ಮಾಜಿ ನಾಯಕ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಜ್ಯೂನಿಯರ್ ಕ್ರಿಕೆಟ್‌ನಲ್ಲಿ ಮಿಂಚಿ ಸುದ್ದಿಯಾಗಿದ್ದಾರೆ.

ಅರ್ಜುನ್ ತೆಂಡೂಲ್ಕರ್ ಹಾಗೂ ಸಮಿತ್ ದ್ರಾವಿಡ್ ಬಳಿಕ ಮತ್ತೊರ್ವ ದಿಗ್ಗಜ ಕ್ರಿಕೆಟಿಗನ ಪುತ್ರ ಇದೀಗ ಸದ್ದು ಮಾಡುತ್ತಿದ್ದಾನೆ. ಶ್ರೀಲಂಕಾ ತಂಡದ ಮಾಜಿ ನಾಯಕ ಸನತ್ ಜಯಸೂರ್ಯ ಪುತ್ರ ರಾನುಕ ಜಯಸೂರ್ಯ ಇದೀಗ ಬ್ಯಾಟಿಂಗ್ ಕೌಶಲ್ಯ ಪ್ರದರ್ಶಿಸಿದ್ದಾರೆ.

View post on Instagram

ಸ್ವತಃ ಸನತ್ ಜಯಸೂರ್ಯ ಪುತ್ರನಿಗೆ ಥ್ರೋ ಡೌನ್ ಮಾಡುತ್ತಿರುವ ವೀಡಿಯೋವನ್ನ ಪೋಸ್ಟ್ ಮಾಡಿದ್ದಾರೆ. ನೆಟ್ಸ್‌ನಲ್ಲಿ ತಂದೆಯ ಥ್ರೋಡೌನ್‌ಗೆ ಪುತ್ರ ರಾನುಕ ಜಯಸೂರ್ಯ ಅಷ್ಟೇ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ.

ಇದನ್ನು ಓದಿ: ಕೊಹ್ಲಿಯನ್ನ ಔಟ್ ಮಾಡೋದು ಹೇಗೆ? ಸ್ಟುವರ್ಟ್ ಬ್ರಾಡ್ ಹೇಳಿದ್ರು ಸೀಕ್ರೆಟ್!

ಸನತ್ ಜಯಸೂರ್ಯ ವೀಡಿಯೋಗೆ ಲಂಕಾ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ತಂದೆಯಂತೆ ಮಗ, ಶೀಘ್ರದಲ್ಲೇ ಜ್ಯೂನಿಯರ್ ಜಯಸೂರ್ಯ ಲಂಕಾ ತಂಡ ಸೇರಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

ಇದನ್ನು ಓದಿ: ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಂ.1 ಲವ್ ಯಾರು ಗೊತ್ತಾ ?

ಇದನ್ನು ಓದಿ: ತವರಿಗೆ ಆಗಮಿಸೋ ಮುನ್ನ ಕೊಹ್ಲಿ ಜೊತೆ ಅನುಷ್ಕಾ ಶಾಂಪಿಂಗ್!