ಬಿಸಿಸಿಐ ನೂತನ ನಿಮಯದ ಪ್ರಕಾರ ಕ್ರಿಕೆಟಿಗರ ಪತ್ನಿಯರು, ಗೆಳತಿಯರು, ಟೆಸ್ಟ್ ಸರಣಿಯ ಆರಂಭಿಕ 2 ವಾರಗಳ ಕಾಲ ಟೀಂ ಇಂಡಿಯಾ ಜೊತೆ ಇರುವಂತಿಲ್ಲ. ಆದರೆ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಇಂಗ್ಲೆಂಡ್‌ನ ಶಾಂಪಿಂಗ್ ಮಾಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಬರ್ಮಿಂಗ್‌ಹ್ಯಾಮ್(ಜು.31): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಅಂತಿಮ ತಯಾರಿಯಲ್ಲಿದೆ. ನಾಳೆಯಿಂದ(ಆ.1)ರಿಂದ ಮೊದಲ ಟೆಸ್ಟ್ ಆರಂಭಗೊಳ್ಳಲಿದೆ. ಕಠಿಣ ಅಭ್ಯಾಸ ನಡೆಸಿರುವ ಟೀಂ ಇಂಡಿಯಾ, ಸಿಕ್ಕ ಅಲ್ಪ ಸಮಯದಲ್ಲಿ ರಿಲ್ಯಾಕ್ಸ್ ಆಗಿದೆ.

ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬರ್ಮಿಂಗ್‌ಹ್ಯಾಮ್ ಶಾಂಪಿಂಗ್ ಮಾಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಾಂಪಿಂಗ್ ಬಳಿಕ ಅನುಷ್ಕಾ ಶರ್ಮಾ ತವರಿಗೆ ವಾಪಸ್ಸಾಗಿದ್ದಾರೆ. 

View post on Instagram

 ಬಿಸಿಸಿಐ ನೂತನ ನಿಯಮದ ಪ್ರಕಾರ, ಟೆಸ್ಟ್ ಪಂದ್ಯದ ಆರಂಭಿಕ 2 ವಾರಗಳ ಕಾಲ ಕ್ರಿಕೆಟಿಗರ ಪತ್ನಿಯರು, ಗೆಳೆತಿಯರು ಜೊತೆಗೆ ತಂಗುವಂತಿಲ್ಲ. ಹೀಗಾಗಿ ಅನುಷ್ಕಾ ತವರಿಗೆ ವಾಪಾಸ್ಸಾಗೋ ಮುನ್ನ ಕೊಹ್ಲಿ ಜೊತೆ ಶಾಂಪಿಂಗ್ ತೆರಳಿದ್ದಾರೆ.

&

View post on Instagram