ಬರ್ಮಿಂಗ್‌ಹ್ಯಾಮ್(ಜು.31): ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗಿರುವ ಆತಿಥೇಯ ಇಂಗ್ಲೆಂಡ್ ತಂಡದ ಎಲ್ಲೂ ಗಮನ ಕೇಂದ್ರೀಕೃತವಾಗಿರೋದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಲೆ. ಕೊಹ್ಲಿ ವಿಕೆಟ್ ಕಬಳಿಸೋದೇ ಇಂಗ್ಲೆಂಡ್ ತಂಡದ ಪ್ರಮುಖ ಚರ್ಚಾ ವಿಷಯ.

ಇಂಗ್ಲೆಂಡ್ ತಂಡದ ಹಲವು ಟೀಂ ಮೀಟಿಂಗ್‌ಗಳಲ್ಲಿ ಈಗಾಗಲೇ ವಿರಾಟ್ ಕೊಹ್ಲಿಯನ್ನ ಔಟ್ ಮಾಡಲು ಯಾವ ತಂತ್ರ ಅನುಸರಿಸಬೇಕು ಅನ್ನೋದನ್ನ ಚರ್ಚಿಸಲಾಗಿದೆ. ಇದೀಗ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಕೊಹ್ಲಿ ವಿಕೆಟ್ ಕಬಳಿಸೋ ಕುರಿತು ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

ವಿಶ್ವದ ನಂ.1 ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸೋದು ನಿಜಕ್ಕೂ ಸವಾಲು. ಎರಡೂ ದಿಕ್ಕಿನಿಂದ ವಿರಾಟ್ ಮೇಲೆ ಹೆಚ್ಚಿನ ಒತ್ತಡ ಹೇರಬೇಕು. ಇದು ಸಾಧ್ಯವಾದರೆ ಕೊಹ್ಲಿಯನ್ನ ಔಟ್ ಮಾಡಬಹುದು ಎಂದು ಸ್ಟುವರ್ಟ್ ಬ್ರಾಡ್ ಹೇಳಿದ್ದಾರೆ.

ಇದನ್ನು ಓದಿ: ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಂ.1 ಲವ್ ಯಾರು ಗೊತ್ತಾ ?

ಜೇಮ್ಸ್ ಆಂಡರ್ಸ್ ದಾಳಿಗೆ ಕೊಹ್ಲಿ ನಿಧಾನಗತಿಯಲ್ಲಿ ಬ್ಯಾಟ್ ಮಾಡಿ, ನನ್ನ ಓವರ್‌ನಲ್ಲಿ ಅಬ್ಬರಿಸಿದರೆ ಕೊಹ್ಲಿ ವಿಕೆಟ್ ಕಬಳಿಸಲು ಕಷ್ಟ. ಹೀಗಾಗಿ ಇಬ್ಬರು ಬೌಲರ್‌ಗಳು ಸತತವಾಗಿ ಕೊಹ್ಲಿ ಮೇಲೆ ಒತ್ತಡ ಹೇರಬೇಕು ಎಂದು ಬ್ರಾಡ್ ಸೂಚಿಸಿದ್ದಾರೆ.

ಇದನ್ನು ಓದಿ: ತವರಿಗೆ ಆಗಮಿಸೋ ಮುನ್ನ ಕೊಹ್ಲಿ ಜೊತೆ ಅನುಷ್ಕಾ ಶಾಂಪಿಂಗ್!