ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಂ.1 ಲವ್ ಯಾರು ಗೊತ್ತಾ ?

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 31, Jul 2018, 2:51 PM IST
Hardik pandya reveals his number 1 love
Highlights

ಟೀಂ ಇಂಡಿಯಾ ಸ್ಟೈಲೀಶ್ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹೆಸರು ಹಲವು ಬಾಲಿವುಡ್ ನಟಿಯರ ಜೊತೆಗೆ ಥಳುಕುಹಾಕಿಕೊಂಡಿದೆ. ಆದರೆ ಪಾಂಡ್ಯ ಮಾತ್ರ ತಮ್ಮ ಲವ್ ಸೀಕ್ರೆಟ್ ಬಿಚ್ಚಿಟ್ಟಿರಲಿಲ್ಲ. ಆದರೆ ಇದೇ  ಮೊದಲ ಬಾರಿಗೆ ಪಾಂಡ್ಯ ತಮ್ಮ ನಂ.1 ಲವ್ ಬಹಿರಂಗ ಪಡಿಸಿದ್ದಾರೆ.
 

ಬರ್ಮಿಂಗ್‌ಹ್ಯಾಮ್(ಜು.31): ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅನ್ ಫೀಲ್ಡ್ ಹಾಗೂ ಆಫ್ ದಿ ಫೀಲ್ಡ್‌ನಲ್ಲೂ ತುಂಬಾ ಆಕ್ಟೀವ್. ಸ್ಟೈಲೀಶ್ ಕ್ರಿಕೆಟರ್  ಪಾಂಡ್ಯಗೆ ಅಷ್ಟೇ ಫೀಮೇಲ್ ಫ್ಯಾನ್ ಫಾಲೋವರ್ಸ್ ಇದ್ದಾರೆ.

ಹಾರ್ದಿಕ್ ಪಾಂಡ್ಯ ಹೆಸರು ಕೂಡ ಹಲವು ಬಾಲಿವುಡ್ ಹಾಗೂ ಮಾಡೆಲ್‌ಗಳ ಜೊತೆ ಥಳುಕುಹಾಕಿಕೊಂಡಿದೆ. ಬಾಲಿವುಡ್ ನಟಿ ಎಲ್ಲಿ ಅವ್ರಾಮ್, ಇಷಾ ಗುಪ್ತಾ ಸೇರಿದಂತೆ ಹಲವು ನಟಿಯರ ಜೊತೆಗೆ ಪಾಂಡ್ಯ ಹೆಸರು ಕೇಳಿಬಂದಿತ್ತು. ಆದರೆ ಹಾರ್ದಿಕ್ ಪಾಂಡ್ಯ ಮಾತ್ರ ನಾವು ಬೆಸ್ಟ್ ಫ್ರೆಂಡ್ಸ್ ಎಂದಿದ್ದರು.

ಇದೇ ಮೊದಲ ಬಾರಿಗೆ ಹಾರ್ದಿಕ್ ಪಾಂಡ್ಯ ತಮ್ಮ ನಂ.1 ಲವ್ ಕುರಿತು ಮಾತನಾಡಿದ್ದಾರೆ. ಹಾರ್ದಿಕ್ ಪಾಂಡ್ಯ ನಂ.1 ಲವ್ ಬೇರೆ ಯಾರು ಅಲ್ಲ, ಅದು ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್.

 

 

ದಿನೇಶ್ ಕಾರ್ತಿಕ್ ನನ್ನ ನಂ.1 ಲವ್ ಎಂದು ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿದ್ದಾರೆ. ಜೊತೆಗೆ ಕಾರ್ತಿಕ್ ಜೊತೆಗಿನ ಸೆಲ್ಫಿ ಫೋಟೋ ಕೂಡ ಅಪ್‌ಲೋಡ್ ಮಾಡಿದ್ದಾರೆ. ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಹಾರ್ದಿಕ್ ಸರ್ಪ್ರೈಸ್ ನೀಡಿದ್ದಾರೆ.

ಇದನ್ನು ಓದಿ: ತವರಿಗೆ ಆಗಮಿಸೋ ಮುನ್ನ ಕೊಹ್ಲಿ ಜೊತೆ ಅನುಷ್ಕಾ ಶಾಂಪಿಂಗ್!

loader