ಕಠ್ಮಂಡು (ಸೆ.30): ಭಾರತ ಕಿರಿಯರ ಫುಟ್ಬಾಲ್‌ ತಂಡ, ಅಂಡರ್‌ 18 ಸ್ಯಾಫ್‌ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಚೊಚ್ಚಲ ಬಾರಿಗೆ ಭಾರತ ತಂಡ ಪ್ರಶಸ್ತಿ ಎತ್ತಿ​ಹಿ​ಡಿದಿದೆ. ಭಾನು​ವಾ​ರ ಇಲ್ಲಿ ನಡೆದ ಫೈನಲ್‌ ಪಂದ್ಯ​ದಲ್ಲಿ ಬಾಂಗ್ಲಾ​ದೇಶ ವಿರುದ್ಧ ಭಾರತ 2-1 ಗೋಲು​ಗಳ ಅಂತ​ರ​ದಲ್ಲಿ ಗೆಲುವು ಸಾಧಿ​ಸಿತು.

ಪ್ರೊ ಕಬಡ್ಡಿ 2019: ಪ್ಲೇ-ಆಫ್‌ಗೆ ಲಗ್ಗೆಯಿಟ್ಟ ಹರ್ಯಾಣ

ವಿಕ್ರಂ ಪ್ರತಾಪ್‌ 2ನೇ ನಿಮಿಷದಲ್ಲೇ ಗೋಲು ಬಾರಿಸಿ ಭಾರ​ತಕ್ಕೆ ಆರಂಭಿಕ ಮುನ್ನ​ಡೆ ಒದ​ಗಿ​ಸಿ​ದರು. ಮೊದ​ಲಾ​ರ್ಧವನ್ನು 1-0 ಮುನ್ನಡೆಯೊಂದಿಗೆ ಮುಕ್ತಾ​ಯ​ಗೊ​ಳಿ​ಸುವ ವಿಶ್ವಾಸದಲ್ಲಿದ್ದ ಭಾರ​ತಕ್ಕೆ ಯಾಸಿನ್‌ ಅರಾ​ಫ​ತ್‌ ಆಘಾತ ನೀಡಿ​ದರು. 40ನೇ ನಿಮಿಷದಲ್ಲಿ ಗೋಲು ಬಾರಿ​ಸಿದ ಯಾಸಿಸ್‌, ಬಾಂಗ್ಲಾ 1-1ರಲ್ಲಿ ಸಮ​ಬಲ ಸಾಧಿ​ಸಲು ನೆರ​ವಾ​ದರು.

ದ್ವಿತೀ​ಯಾ​ರ್ಧ​ದಲ್ಲಿ ಉಭಯ ತಂಡ​ಗಳ ನಡುವೆ ಭಾರೀ ಪೈಪೋಟಿ ನಡೆ​ಯಿತು. 90+1ನೇ ನಿಮಿಷದಲ್ಲಿ ರವಿ ಬಹದ್ದೂರ್‌ 30 ಯಾರ್ಡ್‌ಗಳಿಂದ ಬಾರಿ​ಸಿದ ಆಕ​ರ್ಷಕ ಗೋಲು, ಭಾರ​ತದ ಗೆಲು​ವಿಗೆ ಕಾರ​ಣ​ವಾ​ಯಿ​ತು.

ಗುಡ್ ನ್ಯೂಸ್ ! 2020 ಒಲಿಂಪಿಕ್ಸ್‌ಗೆ ಭಾರತ ರಿಲೇ ತಂಡ!

ಟೂರ್ನಿ​ಯಲ್ಲಿ ಭಾರ​ತ, ಬಾಂಗ್ಲಾ​ದೇ​ಶ, ಶ್ರೀಲಂಕಾ, ನೇಪಾಳ, ಮಾಲ್ಡೀವ್‌್ಸ ಹಾಗೂ ಭೂತಾನ್‌ ತಂಡ​ಗಳು ಪಾಲ್ಗೊಂಡಿ​ದ್ದವು. ಭಾರತ ‘ಬಿ’ ಗುಂಪಿ​ನಲ್ಲಿ ಸ್ಥಾನ ಪಡೆ​ದಿತ್ತು. ಬಾಂಗ್ಲಾ ವಿರುದ್ಧ ಗೋಲು ರಹಿತ ಡ್ರಾಗೆ ತೃಪ್ತಿಪ​ಟ್ಟಿದ್ದ ಭಾರತ, ಶ್ರೀಲಂಕಾ ವಿರುದ್ಧ 3-0 ಅಂತ​ರ​ದ​ಲ್ಲಿ ಗೆದ್ದು, ಗುಂಪಿ​ನಲ್ಲಿ ಅಗ್ರ​ಸ್ಥಾನ ಗಳಿ​ಸುವ ಮೂಲಕ ಸೆಮೀಸ್‌ಗೇರಿತ್ತು. ಸೆಮೀಸ್‌ನಲ್ಲಿ ಮಾಲ್ಡೀವ್‌್ಸ ವಿರುದ್ಧ 4-0ಯಲ್ಲಿ ಗೆದ್ದು ಫೈನಲ್‌ ಪ್ರವೇ​ಶಿ​ಸಿತ್ತು. ಬಾಂಗ್ಲಾ​ದೇಶ, ಭೂತಾನ್‌ ವಿರುದ್ಧ 4-0ಯಲ್ಲಿ ಜಯಿಸಿ ಪ್ರಶಸ್ತಿ ಸುತ್ತಿ​ಗೇ​ರಿತ್ತು.

ಕಿರಿ​ಯರ ಭರ್ಜರಿ ಪ್ರದ​ರ್ಶ​ನ!

ಇತ್ತೀಚೆಗಷ್ಟೇ ವಿವಿಧ ವಯೋಮಿತಿಯ ಭಾರತ ಫುಟ್ಬಾಲ್‌ ತಂಡ ಉತ್ತಮ ಪ್ರದರ್ಶನದಿಂದ ಗಮನಸೆಳೆಯುತ್ತಿರುವ ಹಿನ್ನೆಲೆಯಲ್ಲಿ ಅಖಿಲ ಭಾರತ ಫುಟ್ಬಾಲ್‌ ಸಂಸ್ಥೆ (ಎಐಎಫ್‌ಎಫ್‌) ಅಧ್ಯಕ್ಷ ಪ್ರಫುಲ್‌ ಪಟೇಲ್‌ ಸೇರಿದಂತೆ ಇತರೆ ಅಧಿಕಾರಿಗಳು ಶುಭ ಕೋರಿದರು. ಇದೇ ವರ್ಷದ ಆಗಸ್ಟ್‌ನಲ್ಲಿ ನಡೆದಿದ್ದ ಅಂಡರ್‌ 15 ಸ್ಯಾಫ್‌ ಕಪ್‌ ಫುಟ್ಬಾಲ್‌ ಟೂರ್ನಿಯ ಫೈನಲ್‌ನಲ್ಲಿ ಭಾರತ, ಬಾಂಗ್ಲಾದೇಶ ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸಿತ್ತು. ಅಂಡರ್‌ 16 ಭಾರತ ಫುಟ್ಬಾಲ್‌ ತಂಡ, ಎಎಫ್‌ಸಿ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದೆ. ಅಂಡರ್‌ 19 ಭಾರತ ತಂಡ, ಮುಂದಿನ ನವೆಂಬರ್‌ನಲ್ಲಿ ಎಎಫ್‌ಸಿ ಅರ್ಹತಾ ಸುತ್ತಿನಲ್ಲಿ ಆಡಲಿದೆ.