ಪ್ರೊ ಕಬಡ್ಡಿ 2019: ಪ್ಲೇ-ಆಫ್‌ಗೆ ಲಗ್ಗೆಯಿಟ್ಟ ಹರ್ಯಾಣ
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ರೋಚಕ ಪಂದ್ಯದಲ್ಲಿ ಗುಜರಾತ್ ತಂಡವನ್ನು ಕೇವಲ ಒಂದು ಅಂಕದಿಂದ ಮಣಿಸಿದ ಹರ್ಯಾಣ ಸ್ಟೀಲರ್ಸ್ ತಂಡವು 7ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಮೂರನೇ ತಂಡವಾಗಿ ಪ್ಲೇ ಆಫ್ ಹಂತ ಪ್ರವೇಶಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಪಂಚಕುಲಾ[ಸೆ.30]: ಪ್ರೊ ಕಬಡ್ಡಿ 7ನೇ ಆವೃತ್ತಿಯ ಪ್ಲೇ-ಆಫ್ ಹಂತಕ್ಕೆ ಹರ್ಯಾಣ ಸ್ಟೀಲರ್ಸ್ ಪ್ರವೇಶಿಸಿದೆ. ಭಾನುವಾರ ಇಲ್ಲಿ ನಡೆದ ಗುಜರಾತ್ ಫಾರ್ಚೂನ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 39-38ರ ರೋಚಕ ಗೆಲುವು ಸಾಧಿಸಿದ ಹರ್ಯಾಣ ಸ್ಟೀಲರ್ಸ್, ಪ್ಲೇ-ಆಫ್‌ಗೇರಿದ 3ನೇ ತಂಡ ಎನಿಸಿಕೊಂಡಿತು. ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್ ಮೊದಲೆರಡು ತಂಡಗಳಾಗಿ ಪ್ಲೇ-ಆಫ್ಗೇರಿದ್ದವು.
PKL 2019; ಮುಂಬೈ ಮಣಿಸಿದ ಬೆಂಗಳೂರು; ಪ್ಲೇ ಆಫ್ ತವಕದಲ್ಲಿ ಬುಲ್ಸ್!
ಒಟ್ಟು 6 ತಂಡಗಳು ಪ್ಲೇ-ಆಫ್ ಪ್ರವೇಶಿಸಲಿವೆ. ಬೆಂಗಳೂರು ಬುಲ್ಸ್, ಯು.ಪಿ.ಯೋಧಾ ಹಾಗೂ ಯು ಮುಂಬಾ ತಂಡಗಳು ಕ್ರಮವಾಗಿ 4, 5 ಹಾಗೂ 6ನೇ ಸ್ಥಾನದಲ್ಲಿದ್ದು ಪ್ಲೇ-ಆಫ್‌ಗೇರುವ ನೆಚ್ಚಿನ ತಂಡಗಳು ಎನಿಸಿಕೊಂಡಿವೆ.
ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!
ಭಾರೀ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ವಿಕಾಸ್ ಖಂಡೋಲಾ (10 ಅಂಕ), ಪ್ರಶಾಂತ್ ರೈ (09 ಅಂಕ) ಹರ್ಯಾಣ ಸ್ಟೀಲರ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಡೆಲ್ಲಿಗೆ 15ನೇ ಜಯ!
ದಬಾಂಗ್ ಡೆಲ್ಲಿ ತಂಡದ ಜಯದ ಓಟ ಮುಂದುವರಿದಿದೆ. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಡೆಲ್ಲಿ, ಪುಣೇರಿ ಪಲ್ಟನ್ ವಿರುದ್ಧ 60-40ರ ಭರ್ಜರಿ ಗೆಲುವು ಸಾಧಿಸಿತು.
ಟೂರ್ನಿಯಲ್ಲಿ 82 ಅಂಕ ಗಳಿಸಿರುವ ಡೆಲ್ಲಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು ತಂಡ ನೇರವಾಗಿ ಸೆಮಿಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ. ಯುವ ರೈಡರ್ ನವೀನ್ ಕುಮಾರ್ 19 ಅಂಕ ಗಳಿಸಿ ಡೆಲ್ಲಿ ಗೆಲುವಿಗೆ ನೆರವಾದರು. ಈ ಆವೃತ್ತಿಯಲ್ಲಿ ಸತತ 17 ಪಂದ್ಯಗಳಲ್ಲಿ ನವೀನ್ ಕುಮಾರ್ ಸೂಪರ್ 10 ಸಾಧಿಸಿದ ದಾಖಲೆ ಬರೆದರು.