ಚಿತ್ತಗಾಂಗ್‌[ಸೆ.07]: ಬಾಂಗ್ಲಾ​ದೇಶ ವಿರುದ್ಧ ಏಕೈಕ ಟೆಸ್ಟ್‌ನಲ್ಲಿ ಆಫ್ಘಾ​ನಿ​ಸ್ತಾನ ಮೇಲುಗೈ ಸಾಧಿ​ಸಿದೆ. ಮೊದಲ ಇನಿಂಗ್ಸ್‌ನಲ್ಲಿ 342 ರನ್‌ ಗಳಿ​ಸಿದ್ದ ಆಫ್ಘನ್‌, 2ನೇ ದಿನ​ದಂತ್ಯಕ್ಕೆ ಬಾಂಗ್ಲಾ​ವನ್ನು 8 ವಿಕೆಟ್‌ಗೆ 194 ರನ್‌ಗಳಿಗೆ ನಿಯಂತ್ರಿ​ಸಿತ್ತು. ಈ ಮೂಲಕ ಆತಿ​ಥೇ​ಯ​ರು ಇನ್ನೂ 148 ರನ್‌ ಹಿನ್ನಡೆ ಅನುಭವಿಸಿದ್ದರು. ಇನ್ನು ಮೂರನೇ ದಿನದಾಟ ಆರಂಭಿಸಿದ ಬಾಂಗ್ಲಾದೇಶ ತನ್ನ ಖಾತೆಗೆ 11 ರನ್ ಸೇರಿಸುವಷ್ಟರಲ್ಲಿ ಇನ್ನೆರಡು ವಿಕೆಟ್ ಕಳೆದುಕೊಂಡಿತು.  

15 ವರ್ಷದ ದಾಖಲೆ ಅಳಿಸಿ ಹಾಕಲು ಸಜ್ಜಾದ ರಶೀದ್ ಖಾನ್!

ಅಸ್ಗರ್‌ ಆಫ್ಘ​ನ್‌ 92, ನಾಯಕ ರಶೀದ್‌ ಖಾನ್‌ 51 ರನ್‌ ಗಳಿಸಿ ತಂಡ ದೊಡ್ಡ ಮೊತ್ತ ಕಲೆಹಾಕಲು ನೆರ​ವಾ​ದರು. ರಶೀದ್‌ 5 ವಿಕೆಟ್‌ ಕಿತ್ತು ಬೌಲಿಂಗ್‌ನಲ್ಲೂ ಮಿಂಚಿದರು.

ರಶೀದ್‌ ಖಾನ್‌ ಆಫ್ಘನ್‌ ಕ್ರಿಕೆಟ್‌ನ ನೂತನ ನಾಯಕ

ಇನ್ನು ಎರಡನೇ ಇನಿಂಗ್ಸ್ ಆರಂಭಿಸಿರುವ ಆಫ್ಘಾನಿಸ್ತಾನಕ್ಕೆ ಶಕೀಬ್ ಅಲ್ ಹಸನ್ ಆಘಾತ ನೀಡಿದ್ದಾರೆ. ಲಂಚ್ ಬ್ರೇಕ್ ವೇಳೆಗೆ ಆಫ್ಘಾನ್ 3 ವಿಕೆಟ್ ಕಳೆದುಕೊಂಡು 56 ರನ್ ಬಾರಿಸಿದ್ದು, ಒಟ್ಟಾರೆ 193 ರನ್’ಗಳ ಮುನ್ನಡೆ ಸಾಧಿಸಿದೆ. ಶಕೀಬ್ 2 ವಿಕೆಟ್ ಪಡೆದಿದ್ದಾರೆ. 

ಸ್ಕೋರ್‌: ಆಫ್ಘನ್‌ 342, 
ಬಾಂಗ್ಲಾ 205