ಕಾಬೂಲ್‌(ಜು.13): ತಾರಾ ಸ್ಪಿನ್ನರ್‌ ರಶೀದ್‌ ಖಾನ್‌ ಶುಕ್ರವಾರ ಆಫ್ಘಾನಿಸ್ತಾನ ಕ್ರಿಕೆಟ್‌ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಎಲ್ಲಾ ಮೂರೂ ಮಾದರಿಯಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.  

ರಶೀದ್ ಖಾನ್ ಬಳಿ ಕ್ಷಮೆ ಕೇಳಿದ ಐಸ್‌ಲೆಂಡ್ ಕ್ರಿಕೆಟ್ ಮಂಡಳಿ!

ಕಳೆದ ತಿಂಗಳು ರಶೀದ್‌ರನ್ನು ಟಿ20 ತಂಡಕ್ಕೆ ಮಾತ್ರ ನಾಯಕನನ್ನಾಗಿ ಮಾಡಲಾಗಿತ್ತು. ಮಾಜಿ ನಾಯಕ ಅಸ್ಗರ್‌ ಆಫ್ಘನ್‌ರನ್ನು ಎಲ್ಲಾ ಮೂರು ಮಾದರಿಗೆ ಉಪನಾಯಕನನ್ನಾಗಿ ನೇಮಿಸಲಾಗಿದೆ. ಟಿ20 ಶ್ರೇಯಾಂಕದಲ್ಲಿ ನಂ.01 ಸ್ಥಾನದಲ್ಲಿರುವ ರಶೀದ್, ಏಕದಿನ ಶ್ರೇಯಾಂಕದಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ರಶೀದ್ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. 

ವಿಶ್ವಕಪ್‌ಗೂ ಮುನ್ನ ಅಸ್ಗರ್‌ರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ವಿಶ್ವಕಪ್‌ನಲ್ಲಿ ಗುಲ್ಬದಿನ್‌ ನೈಬ್‌ ತಂಡ ಮುನ್ನಡೆಸಿದ ರೀತಿ ಬಗ್ಗೆ ಆಫ್ಘಾನಿಸ್ತಾನ ಕ್ರಿಕೆಟ್‌ ಮಂಡಳಿ ಅಸಮಾಧಾನಗೊಂಡ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಮಾಡಲಾಗಿದೆ. 2018ರ ಏಷ್ಯಾಕಪ್ ಟೂರ್ನಿಯ ವೇಳೆ ಗಮನಾರ್ಹ ಪ್ರದರ್ಶನ ತೋರಿದ್ದ ಆಫ್ಘಾನಿಸ್ತಾನ, 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಂದೂ ಗೆಲುವು ಕಾಣದೇ ತನ್ನ ಅಭಿಯಾನ ಅಂತ್ಯಗೊಳಿಸಿತ್ತು.