ರೋಹಿತ್ ಶರ್ಮಾಗೆ ಹೊಸ ಹೆಸರಿಟ್ಟ ರಶೀದ್ ಖಾನ್

Rashid Khan congratulates Team India on the T20I series win
Highlights

ರೋಹಿತ್ ಶರ್ಮಾ ಆಕರ್ಷಕ ಶತಕದ ನೆರವಿನಿಂದ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 2-1 ಅಂತರದಲ್ಲಿ ಜಯಿಸಿದೆ. ಇದು ಮುಂಬರುವ ಏಕದಿನ ಹಾಗೂ ಟೆಸ್ಟ್ ಸರಣಿಯಾಡಲು ವಿರಾಟ್ ಕೊಹ್ಲಿ ಪಡೆಯ ಆತ್ಮವಿಶ್ವಾಸ ಹೆಚ್ಚಿಸಿದೆ.

ಬೆಂಗಳೂರು[ಜು.09]: ರೋಹಿತ್ ಶರ್ಮಾ ಆಕರ್ಷಕ ಶತಕದ ನೆರವಿನಿಂದ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 2-1 ಅಂತರದಲ್ಲಿ ಜಯಿಸಿದೆ. ಇದು ಮುಂಬರುವ ಏಕದಿನ ಹಾಗೂ ಟೆಸ್ಟ್ ಸರಣಿಯಾಡಲು ವಿರಾಟ್ ಕೊಹ್ಲಿ ಪಡೆಯ ಆತ್ಮವಿಶ್ವಾಸ ಹೆಚ್ಚಿಸಿದೆ.

ರೋಹಿತ್ ಶರ್ಮಾ ಬಾರಿಸಿದ ದಾಖಲೆಯ ಶತಕಕ್ಕೆ ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಅದರಲ್ಲೂ ಆಫ್ಘಾನಿಸ್ತಾನದ ಸ್ಪಿನ್ ಪ್ರತಿಭೆ ರಶೀದ್ ಖಾನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ’ಹಿಟ್’ಮ್ಯಾನ್’ ರೋಹಿತ್ ಶರ್ಮಾ’ರಿಗೆ ಹೊಸ ಹೆಸರಿಟ್ಟಿದ್ದಾರೆ.

ಇದನ್ನು ಓದಿ: ಸ್ಪಿನ್ನರ್ ರಶೀದ್ ಖಾನ್ ಜೊತೆ ಮದುವೆಗೆ ಒಕೆ ಹೇಳಿದ್ಲಾ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯೈಟ್?

ರೋಹಿತ್ ಶರ್ಮಾ ಬ್ಯಾಟಿಂಗ್ ಪ್ರದರ್ಶನವನ್ನು ಕೊಂಡಾಡಿರುವ ರಶೀದ್ ಖಾನ್, ಮುಂಬೈ ಆಟಗಾರನನ್ನು ಮಿಸ್ಟರ್ ರಿಲ್ಯಾಕ್ಸ್ ಅಂಡ್ ಕೂಲ್ ಎಂದು ಹೊಸ ನಾಮಕರಣ ಮಾಡಿದ್ದಾರೆ. ಮಹತ್ವದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ರೋಹಿತ್ ಹಾಗೂ ಟೀಂ ಇಂಡಿಯಾಗೆ ಅಭಿನಂದನೆಗಳು. ರೋಹಿತ್ ಆಟ ಅದ್ಭುತವಾಗಿತ್ತು ಎಂದು ಆಫ್ಘಾನ್ ಲೆಗ್’ಸ್ಪಿನ್ನರ್ ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ: ಚೊಚ್ಚಲ ಪಂದ್ಯದಲ್ಲೇ ಕುಖ್ಯಾತಿಗೆ ಒಳಗಾದ ರಶೀದ್ ಖಾನ್..!

ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ 56 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 11 ಬೌಂಡರಿಗಳ ನೆರವಿನಿಂದ ಅಜೇಯ ನೂರು ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. 
ಇದೀಗ ಭಾರತ ತಂಡವು ಜುಲೈ 12ರಿಂದ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಾಡಲಿದೆ.  

loader