ಬೆಂಗಳೂರು[ಜೂ.15]: ಆಫ್ಘಾನಿಸ್ತಾನದ 19 ವರ್ಷದ ಸ್ಪಿನ್ ಪ್ರತಿಭೆ ರಶೀದ್ ಖಾನ್ ಟೆಸ್ಟ್ ಕ್ರಿಕೆಟ್’ನಲ್ಲಿನ ತನ್ನ ಚೊಚ್ಚಲ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ ಸಾಕಷ್ಟು ಸಂಚಲನ ಮೂಡಿಸಿರುವ ರಶೀದ್ ಟೆಸ್ಟ್ ಕ್ರಿಕೆಟ್’ನಲ್ಲಿ ಡ್ರೀಮ್ ಸ್ಪೆಲ್ ಹಾಕಲು ವಿಫಲರಾದರು. ರಶೀದ್ ಭಾರತ ವಿರುದ್ಧದ ಮೊದಲ ಇನಿಂಗ್ಸ್’ನಲ್ಲಿ 2 ವಿಕೆಟ್ ಪಡೆದರಾದರೂ 147 ರನ್’ಗಳನ್ನು ಬಿಟ್ಟುಕೊಡುವ ಮೂಲಕ ದುಬಾರಿಯಾದರು. ಹೌದು, ಚೊಚ್ಚಲ ಟೆಸ್ಟ್ ಪಂದ್ಯದ ಇನಿಂಗ್ಸ್’ವೊಂದರಲ್ಲಿ ಗರಿಷ್ಠ ರನ್ ನೀಡಿದ ಬೌಲರ್ ಎನ್ನುವ ಕುಖ್ಯಾತಿಗೆ ರಶೀದ್ ಖಾನ್ ಭಾಜನರಾಗಿದ್ದಾರೆ. ಈ ಮೊದಲು 1952ರಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಬೌಲರ್ ಅಮಿರ್ ಎಲೈ 134 ರನ್ ನೀಡಿದ್ದರು.

ಆಫ್ಘಾನಿಸ್ತಾನ ತಂಡವು ಭಾರತದ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನಾಡುತ್ತಿದೆ.