ಸ್ಪಿನ್ನರ್ ರಶೀದ್ ಖಾನ್ ಜೊತೆ ಮದುವೆಗೆ ಒಕೆ ಹೇಳಿದ್ಲಾ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯೈಟ್?

Danielle Wyatt reverts wittily when asked about her wedding with Rashid Khan
Highlights

ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಅಭಿಮಾನಿಗಳಲ್ಲಿ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ಆಟಗಾರ್ತಿ ಡೇನಿಯಲ್ ವ್ಯೈಟ್ ಕೂಡ ಒಬ್ಬರು. ರಶೀದ್ ಜೊತೆಗಿನ ಮದುವೆ ಯಾವಾಗ ಅನ್ನೋ ಪ್ರಶ್ನಗೆ ಡೇನಿಯಲ್ ನೀಡಿದ ಉತ್ತರ ಏನು? ಇಲ್ಲಿದೆ.

ಲಂಡನ್(ಜು.05): ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಇದೀಗ ಅತ್ಯಂತ ಜನಪ್ರೀಯ ಕ್ರಿಕೆಟಿಗರ. 19 ವರ್ಷಗ ರಶೀದ್ ಸ್ಪಿನ್ ಮೋಡಿಗೆ ಇಡೀ ವಿಶ್ವವೇ ತಲಬಾಗಿದೆ. ಐಪಿಎಲ್ ಟೂರ್ನಿ ಮೂಲಕ ಇದೀಗ ವಿಶ್ವ ಕ್ರಿಕೆಟ್ ಅಭಿಮಾನಿಗಳ ಮನೆಮಾತಾಗಿರುವ ರಶೀದ್ ಖಾನ್‌ಗೆ ಅಷ್ಟೇ ಮಹಿಳಾ ಫ್ಯಾನ್ ಫಾಲೋವರ್ಸ್ ಕೂಡ ಇದ್ದಾರೆ.

ರಶೀದ್ ಖಾನ್ ಫ್ಯಾನ್ ಫಾಲೋವರ್ಸ್‌ಗಳಲ್ಲಿ ಇಂಗ್ಲೆಂಡ್ ತಂಡದ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯೈಟ್ ಕೂಡ ಒಬ್ಬರು. 11ನೇ ಆವೃತ್ತಿ ಐಪಿಎಲ್ ಪ್ಲೇ ಆಫ್ ವೇಳೆ ಡೇನಿಯಲ್ ವ್ಯೈಟ್ ಮುಂಬೈನಲ್ಲಿ ರಶೀದ್ ಖಾನ್ ಭೇಟಿಯಾಗಿದ್ದರು. ಇದೀಗ ಡೇನಿಯವ್ ವ್ಯೈಟ್‌ಗೆ ಕೇಳಲಾದ ರಶೀದ್ ಜೊತೆಗಿನ ಮದುವೆ ಪ್ರಶ್ನೆಗೆ ವ್ಯೈಟ್ ನಗುವಿನ ಉತ್ತರ ನೀಡಿದ್ದಾರೆ.

ಕೌಂಟಿ ಕ್ರಿಕೆಟ್‌‌ನಲ್ಲಿ ತೊಡಗಿಸಿಕೊಂಡಿರುವ ರಶೀದ್ ಖಾನ್ ಸೆಸೆಕ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಸಸೆಕ್ಸ್ ತಂಡ ಟ್ವಿಟರ್ ಪೇಜ್‌ನಲ್ಲಿ ತಂಡದ ಗೆಲುವಿಗೆ ಕಾರಣರಾದ ರಶೀದ್ ಖಾನ್ ಬೌಲಿಂಗ್ ವೀಡಿಯೋ ಅಪ್‌ಲೋಡ್ ಮಾಡಿದ್ದರು. 

 

 

ರಶೀದ್ ಪ್ರದರ್ಶನದ ವೀಡಿಯೋಗೆ ಡೇನಿಯಲ್ ವ್ಯೈಟ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಅಭಿಮಾನಿಯೊರ್ವ ನೇರವಾಗಿ ಡೇನಿಯಲ್ ವ್ಯೈಟ್‌ಗೆ ರಶೀದ್ ಖಾನ್ ಜೊತೆಗಿನ ಮದುವೆ ಯಾವಾಗ ಎಂದು ಪ್ರಶ್ನಿಸಿದ್ದಾರೆ.  ಡೇನಿಯಲ್ ಈ ಪ್ರಶ್ನೆಗೆ ಪ್ರತಿಕ್ರಿಯಿಸೂ ಮೂಲಕು ಭಾರಿ ಸುದ್ದಿಯಾಗಿದ್ದಾರೆ.

 

 

ಅಭಿಮಾನಿಗೆ ನೀಡಿದ ಪ್ರತಿಕ್ರಿಯೆಯನ್ನ ಡೇನಿಯಲ್, ರಶೀದ್ ಖಾನ್‌ಗೂ ಟ್ಯಾಗ್ ಮಾಡಿದ್ದಾರೆ. ಈ ಮೂಲಕ ತನ್ನ ಉತ್ತರ ರಶೀದ್ ಖಾನ್‌ಗೆ ತುಲುಪುವ ಹಾಗೆ ಮಾಡಿದ್ದಾರೆ. 
 

loader