ಕಾಬೂಲ್[ಜೂ.25]: ಭಾರತಾದ್ಯಂತ ಜನಪ್ರಿಯಗೊಂಡಿರುವ ‘ಹಮ್ ಫಿಟ್ ತೋ, ಇಂಡಿಯಾ ಫಿಟ್’ ಫಿಟ್ನೆಸ್ ಅಭಿಯಾನವನ್ನು ಆಫ್ಘನ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

ತಮ್ಮ ಸನ್‌ರೈಸರ್ಸ್‌ ಐಪಿಎಲ್ ತಂಡದ ಸಹ ಆಟಗಾರ ಸಿದ್ಧಾರ್ಥ್ ಕೌಲ್ ಹಾಕಿದ್ದ ಫಿಟ್ನೆಸ್ ಸವಾಲನ್ನು ಸ್ವೀಕರಿಸಿರುವ ರಶೀದ್, ತಾವು ಕಸರತ್ತು ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದು ‘ಹಮ್ ಫಿಟ್ ತೋ, ವರ್ಲ್ಡ್ ಫಿಟ್ (ನಾವು ಫಿಟ್ ಆಗಿದ್ದರೆ,ಜಗತ್ತು ಫಿಟ್ ಆಗಿರುತ್ತದೆ)’ ಎಂದು ಬರೆದಿದ್ದಾರೆ.

ಇದನ್ನು ಓದಿ: ಚೊಚ್ಚಲ ಪಂದ್ಯದಲ್ಲೇ ಕುಖ್ಯಾತಿಗೆ ಒಳಗಾದ ರಶೀದ್ ಖಾನ್..!

ರಶೀದ್ ಖಾನ್ ಫಿಟ್ನೆಸ್ ಸವಾಲು ಸ್ವೀಕರಿಸಿದ್ದಕ್ಕೆ ಸಿದ್ದಾರ್ಥ್ ಕೌಲ್ ಧನ್ಯವಾದ ಅರ್ಪಿಸಿದ್ದಾರೆ.

ಸನ್’ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುವ ಆಫ್ಘಾನ್’ನ ಸ್ಟಾರ್ ಬೌಲರ್ ರಶೀದ್ ಖಾನ್ ಪ್ರಸಕ್ತ ಆವೃತ್ತಿಯ ಐಪಿಎಲ್’ನಲ್ಲಿ 17 ಪಂದ್ಯಗಳನ್ನಾಡಿ 21 ವಿಕೆಟ್ ಕಬಳಿಸಿದ್ದರು.