ಬೆಂಗಳೂರು(ಜ.13): ಜ.15ರಿಂದ 19ರ ವರೆಗೂ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜಸ್ಥಾನ ವಿರುದ್ಧ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದೆ. ಗಾಯದ ಸಮಸ್ಯೆಯಿಂದಾಗಿ ಬರೋಡಾ ವಿರುದ್ಧ ಪಂದ್ಯಕ್ಕೆ ಗೈರಾಗಿದ್ದ ಆಲ್ರೌಂಡರ್‌ ಕೆ.ಗೌತಮ್‌ ತಂಡಕ್ಕೆ ಮರಳಿದ್ದಾರೆ. 

ಇದನ್ನೂ ಓದಿ: 87 ವರ್ಷದ ಅಭಿಮಾನಿ ಆಸೆ ಈಡೇರಿಸಿದ ಧೋನಿ

ಕಳೆದ ಪಂದ್ಯದಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದ ಯುವ ಆಲ್ರೌಂಡರ್‌ ಶುಭಾಂಗ್‌ ಹೆಗ್ಡೆಯನ್ನು ತಂಡದಿಂದ ಕೈಬಿಡಲಾಗಿದೆ. ತಂಡದಲ್ಲಿ ಮತ್ತ್ಯಾವ ಬದಲಾವಣೆಗಳನ್ನು ಮಾಡಲಾಗಿಲ್ಲ. ಮನೀಶ್‌ ಪಾಂಡೆ ನಾಯಕನಾಗಿ ಮುಂದುವರಿದಿದ್ದು, ಶ್ರೇಯಸ್‌ ಗೋಪಾಲ್‌ ಉಪನಾಯಕನ ಜವಾಬ್ದಾರಿ ಪಡೆದಿದ್ದಾರೆ.

ಇದನ್ನೂ ಓದಿ: ಖೇಲೋ ಇಂಡಿಯಾ: ಚಿನ್ನ ಗೆದ್ದ ರಾಜ್ಯದ ಸಂಜಯ್‌, ಪೂಜಾ

ತಂಡದ ವಿವರ: ಮನೀಶ್‌ ಪಾಂಡೆ(ನಾಯಕ), ಶ್ರೇಯಸ್‌ ಗೋಪಾಲ್‌ (ಉಪನಾಯಕ), ವಿನಯ್‌ ಕುಮಾರ್‌, ನಿಶ್ಚಲ್‌ ಡಿ., ಕರುಣ್‌ ನಾಯರ್‌, ಆರ್‌.ಸಮಥ್‌ರ್‍, ಅಭಿಮನ್ಯು ಮಿಥುನ್‌, ರೋನಿತ್‌ ಮೋರೆ, ಕೆ.ಗೌತಮ್‌, ಪ್ರಸಿದ್ಧ್ ಕೃಷ್ಣ, ಸಿದ್ಧಾರ್ಥ್ ಕೆ.ವಿ, ಜೆ.ಸುಚಿತ್‌, ಶರತ್‌ ಬಿ.ಆರ್‌, ಶರತ್‌ ಶ್ರೀನಿವಾಸ್‌, ಪವನ್‌ ದೇಶಪಾಂಡೆ.