ಸಿಡ್ನಿ(ಜ.13): ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಹೊಂದಿರುವ ಭಾರತ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ, ಮತ್ತೊಮ್ಮೆ ತಮ್ಮ ಶಾಂತ ಹಾಗೂ ಸರಳ ಮನೋಭಾವದಿಂದ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಆಸ್ಪ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಅಭ್ಯಾಸ ನಡೆಸುವ ವೇಳೆ, ಅವರ ಆಟವನ್ನು ವೀಕ್ಷಿಸಲು ಬಂದಿದ್ದ 87 ವರ್ಷದ ಎಡಿತ್‌ ನಾರ್ಮನ್‌ ಎಂಬುವ ಅಭಿಮಾನಿಯನ್ನು ಭೇಟಿಯಾಗಿದ್ದಾರೆ. 

 

 

ಇದನ್ನೂ ಓದಿ: ಏಕದಿನ: ಪಾಂಡ್ಯ,ರಾಹುಲ್ ಸ್ಥಾನಕ್ಕೆ ಮಯಾಂಕ್-ವಿಜಯ್‌ಗೆ ಸ್ಥಾನ!

ಧೋನಿಯನ್ನು ಭೇಟಿಯಾಗುವುದು ಎಡಿತ್‌ರ ಮಹದಾಸೆಯಾಗಿತ್ತಂತೆ. ‘ನಾನು ಧೋನಿಯನ್ನು ಭೇಟಿ ಮಾಡುತ್ತೇನೆಂದು ನಿರೀಕ್ಷಿಸಿರಲಿಲ್ಲ. ನಾನು ತುಂಬಾ ಅದೃಷ್ಟವಂತೆ. ನನಗೆ ಹೆಮ್ಮೆ ಎನಿಸುತ್ತಿದೆ. ಇದೇ ಅಂಗಳದಲ್ಲಿ ಸರ್‌ ಡಾನ್‌ ಬ್ರಾಡ್ಮನ್‌ರನ್ನು ಭೇಟಿಯಾಗಿದ್ದೆ’ ಎಂದು ಎಡಿತ್‌ ಹೇಳಿದ್ದಾರೆ.

ಇದನ್ನೂ ಓದಿ: ಆಸಿಸ್ ವಿರುದ್ಧದ ತವರಿನ ಸರಣಿಯ ವೇಳಾಪಟ್ಟಿ ಪ್ರಕಟ: ಬೆಂಗಳೂರಲ್ಲಿ ಮೊದಲ ಪಂದ್ಯ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 34 ರನ್ ಸೋಲು ಅನುಭವಿಸಿತು. ಆದರೆ ಎಂ.ಎಸ್.ಧೋನಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆಕರ್ಷಕ ಅರ್ಧಶತಕ ಸಿಡಿಸಿದ ಧೋನಿ ಏಕದಿನ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.