ಶಿವಮೊಗ್ಗ(ಡಿ.25): ರೈಲ್ವೇಸ್ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ 176 ರನ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕರ್ನಾಟಕ ಪ್ರಸಕ್ತ ರಣಜಿ ಟೂರ್ನಿಯಲ್ಲಿ 2ನೇ ಗೆಲುವು ಸಾಧಿಸೋ ಮೂಲಕ 21 ಅಂಕ ಸಂಪಾದಿಸಿದೆ. ಈ ಮೂಲಕ ಕರ್ನಾಟಕ ಕ್ವಾರ್ಟರ್ ಫೈನಲ್ ಆಸೆ ಜೀವಂತವಾಗಿದೆ.

ಇದನ್ನೂ ಓದಿ:  ಇಂಡೋ-ಆಸಿಸ್ ಟೆಸ್ಟ್: ಕನ್ನಡಿಗ ಮಯಾಂಕ್ ಕೋಚ್ ಜೊತೆ Exclusive ಸಂದರ್ಶನ

ಗೆಲುವಿಗೆ 362 ರನ್ ಚೇಸ್ ಮಾಡುತ್ತಿದ್ದ ರೈಲ್ವೇಸ್ ತಂಡಕ್ಕೆ ಕೃಷ್ಣಪ್ಪ ಗೌತಮ್ ಬ್ರೇಕ್ ಹಾಕಿದರು. 159ನೇ ರನ್‌ಗೆ 4ನೇ ವಿಕೆಟ್ ಕಳೆದುಕೊಂಡ ರೈಲ್ವೇಸ್ ತಂಡ, ದಿಢೀರ್ ಕುಸಿತ ಕಂಡಿತು. ಕೆ.ಗೌತಮ್ ಬರೋಬ್ಬರಿ 6 ವಿಕೆಟ್ ಕಬಳಿಸೋ ಮೂಲಕ ರೈಲ್ವೇಸ್ ತಂಡವನ್ನ 185 ರನ್‌ ಗಳಿಗೆ ಆಲೌಟ್ ಮಾಡಿದರು. 

ಇದನ್ನೂ ಓದಿ: ಭಾರತದ ಮೊತ್ತ ಮೊದಲ WWE ಚಾಂಪಿಯನ್ ಆಗುವತ್ತ ಕವಿತಾ ದೇವಿ!

ದ್ವಿತೀಯ ಇನ್ನಿಂಗ್ಸ್‌ನಲ್ಲಿ ರೈಲ್ವೇಸ್ ತಂಡದ ನಾಲ್ವರು ಕ್ರಿಕೆಟಿಗರು ಶೂನ್ಯ ಸುತ್ತಿದರು. ಕೆ ಗೌತಮ್ ಜೊತೆಗೆ ಶ್ರೇಯಸ್ ಗೋಪಾಲ್ 2 ಹಾಗೂ ಪ್ರಸಿದ್ ಕೃಷ್ಣ 1 ವಿಕೆಟ್ ಕಬಳಿಸಿದರು. ಈ ಮೂಲಕ ಕರ್ನಾಟಕ ಭರ್ಜರಿ 176ರನ್ ಗೆಲುವು ಸಾಧಿಸಿತು.
ಇದನ್ನೂ ಓದಿ: ಇಂಡೋ-ಆಸಿಸ್ ಬಾಕ್ಸಿಂಗ್ ಡೇ ಟೆಸ್ಟ್- ಏನಿದರ ವಿಶೇಷತೆ?