ಸಿಂಧು ಮಹಿಳಾ ಸಿಂಗಲ್ಸ್‌ನಲ್ಲಿ 12ನೇ, ಪ್ರಣಯ್‌ ಹಾಗೂ ಸೇನ್‌ ಪುರುಷರ ಸಿಂಗಲ್ಸ್‌ನಲ್ಲಿ ಕ್ರಮವಾಗಿ 9 ಮತ್ತು 13ನೇ ಸ್ಥಾನದಲ್ಲಿದ್ದು, ಕ್ರೀಡಾಕೂಟಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದ್ದಾರೆ. ಇನ್ನು ಪುರುಷರ ಡಬಲ್ಸ್‌ನಲ್ಲಿ 3ನೇ ಸ್ಥಾನದಲ್ಲಿರುವ ಸಾತ್ವಿಕ್‌-ಚಿರಾಗ್‌ ಶೆಟ್ಟಿ, ಮಹಿಳಾ ಡಬಲ್ಸ್‌ನಲ್ಲಿ 13ನೇ ಸ್ಥಾನದಲ್ಲಿರುವ ತನಿಶಾ ಕ್ರಾಸ್ಟೊ-ಕರ್ನಾಟಕದ ಅಶ್ವಿನಿ ಪೊನ್ನಪ್ಪ ಕೂಡಾ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ನವದೆಹಲಿ: ಪಿ.ವಿ.ಸಿಂಧು, ಲಕ್ಷ್ಯ ಸೇನ್ ಸೇರಿದಂತೆ ಭಾರತದ 7 ಶಟ್ಲರ್‌ಗಳು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಒಲಿಂಪಿಕ್ಸ್‌ ಗೇಮ್ಸ್‌ ಅರ್ಹತಾ ನಿಯಮ ಪ್ರಕಾರ ಗಡುವು ದಿನಾಂಕದ ವೇಳೆ ಸಿಂಗಲ್ಸ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ-16ರಲ್ಲಿ ಇರುವವರು ಒಲಿಂಪಿಕ್ಸ್‌ ಪ್ರವೇಶಿಸುತ್ತಾರೆ.

ಸಿಂಧು ಮಹಿಳಾ ಸಿಂಗಲ್ಸ್‌ನಲ್ಲಿ 12ನೇ, ಪ್ರಣಯ್‌ ಹಾಗೂ ಸೇನ್‌ ಪುರುಷರ ಸಿಂಗಲ್ಸ್‌ನಲ್ಲಿ ಕ್ರಮವಾಗಿ 9 ಮತ್ತು 13ನೇ ಸ್ಥಾನದಲ್ಲಿದ್ದು, ಕ್ರೀಡಾಕೂಟಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದ್ದಾರೆ. ಇನ್ನು ಪುರುಷರ ಡಬಲ್ಸ್‌ನಲ್ಲಿ 3ನೇ ಸ್ಥಾನದಲ್ಲಿರುವ ಸಾತ್ವಿಕ್‌-ಚಿರಾಗ್‌ ಶೆಟ್ಟಿ, ಮಹಿಳಾ ಡಬಲ್ಸ್‌ನಲ್ಲಿ 13ನೇ ಸ್ಥಾನದಲ್ಲಿರುವ ತನಿಶಾ ಕ್ರಾಸ್ಟೊ-ಕರ್ನಾಟಕದ ಅಶ್ವಿನಿ ಪೊನ್ನಪ್ಪ ಕೂಡಾ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

Scroll to load tweet…

ಥಾಮಸ್‌ ಕಪ್‌: ಹಾಲಿ ಚಾಂಪಿಯನ್‌ ಭಾರತ ಕ್ವಾರ್ಟರ್‌ಗೆ ಎಂಟ್ರಿ

ಚೆಂಗ್ಡು(ಚೀನಾ): ಹಾಲಿ ಚಾಂಪಿಯನ್‌ ಭಾರತ ಥಾಮಸ್‌ ಕಪ್‌ ಪುರುಷರ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸತತ 2ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಭಾರತ, ಸೋಮವಾರ ‘ಸಿ’ ಗುಂಪಿನ 2ನೇ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 5-0 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು.

ಆರಂಭಿಕ ಪಂದ್ಯದಲ್ಲಿ ಥಾಯ್ಲೆಂಡನ್ನು 4-1ರಿಂದ ಮಣಿಸಿದ್ದ ಭಾರತ ಮತ್ತೊಮ್ಮೆ ಪ್ರಾಬಲ್ಯ ಸಾಧಿಸಿತು. ಮೊದಲ ಸಿಂಗಲ್ಸ್‌ನಲ್ಲಿ ಪ್ರಣಯ್‌ ಅವರು ಹ್ಯಾರಿ ಹುವಾಂಗ್‌ರನ್ನು ಸೋಲಿಸಿದರೆ, ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಜೋಡಿ ಬೆನ್‌ ಲೇನ್‌-ಸೀನ್‌ ವೆಂಡಿ ಜೋಡಿಯನ್ನು ಮಣಿಸಿತು.

ಟಿ20 ವಿಶ್ವಕಪ್‌ಗೆ ಇಂದು ಭಾರತ ತಂಡ ಪ್ರಕಟ ನಿರೀಕ್ಷೆ: ಮೇ 01 ಡೆಡ್‌ಲೈನ್‌

ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌, ನದೀಮ್ ಡಾಲ್ವಿ ವಿರುದ್ಧ ಗೆದ್ದರೆ, ಧ್ರುವ್‌-ಅರ್ಜುನ್‌ ಜೋಡಿ ರೋರಿ ಈಸ್ಟನ್‌-ಅಲೆಕ್ಸ್‌ ಗ್ರೀನ್‌ರನ್ನು ಸೋಲಿಸಿತು. ಕೊನೆ ಸಿಂಗಲ್ಸ್‌ನಲ್ಲಿ ಚೋಲನ್‌ ಕಯಾನ್‌ ವಿರುದ್ಧ ಕಿರಣ್‌ ಜಾರ್ಜ್‌ ಗೆದ್ದು ಅಂತರವನ್ನು 5-0ಗೆ ಏರಿಸಿದರು.

ಭಾರತ ಬುಧವಾರ ಗುಂಪು ಹಂತದ ಕೊನೆ ಪಂದ್ಯದಲ್ಲಿ 14 ಬಾರಿ ಚಾಂಪಿಯನ್‌ ಇಂಡೋನೇಷ್ಯಾ ವಿರುದ್ಧ ಸೆಣಸಾಡಲಿದೆ.

ಮತ್ತೊಂದೆಡೆ ಈಗಾಗಲೇ ಸತತ 2 ಗೆಲುವಿನ ಮೂಲಕ ಕ್ವಾರ್ಟರ್‌ ಫೈನಲ್‌ ಸ್ಥಾನ ಖಚಿತಪಡಿಸಿಕೊಂಡಿರುವ ಭಾರತ ಮಹಿಳಾ ತಂಡ, ಊಬರ್‌ ಕಪ್‌ ಟೂರ್ನಿಯ ಗುಂಪು ಹಂತದ ಕೊನೆ ಪಂದ್ಯದಲ್ಲಿ ಮಂಗಳವಾರ ಚೀನಾ ವಿರುದ್ಧ ಸೆಣಸಾಡಲಿದೆ. ಟೂರ್ನಿಯ ಇತಿಹಾಸದಲ್ಲಿ ಈ ವರೆಗೂ ಫೈನಲ್‌ಗೇರದ ಭಾರತ, ಈ ಬಾರಿ ಪ್ರಶಸ್ತಿ ಬರ ನೀಗಿಸುವ ನಿರೀಕ್ಷೆಯಲ್ಲಿದೆ.

ಸ್ಕೀಟ್‌ ಶೂಟಿಂಗ್‌: ಭಾರತದ ಮಹೇಶ್ವರಿಗೆ ಒಲಿಂಪಿಕ್ಸ್‌ಗೆ

ದೋಹಾ: ಇಲ್ಲಿ ನಡೆದ ಐಎಸ್‌ಎಸ್‌ಎಫ್‌ ಶಾಟ್‌ಗನ್‌ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಸ್ಕೀಟ್‌ ಶೂಟರ್‌ ಮಹೇಶ್ವರಿ ಚೌಹಾಣ್‌ ಪ್ಯಾರಿಸ್‌ ಒಲಿಂಪಿಕ್ಸ್‌ ಕೋಟಾ ಗೆದ್ದಿದ್ದಾರೆ. ಇದು ಮಹಿಳಾ ಸ್ಕೀಟ್‌ ಶೂಟಿಂಗ್‌ನಲ್ಲಿ ಭಾರತಕ್ಕೆ ಲಭಿಸಿದ 2ನೇ ಒಲಿಂಪಿಕ್ಸ್‌ ಕೋಟಾ. ಒಟ್ಟಾರೆ ಶೂಟಿಂಗ್‌ನಲ್ಲಿ 21ನೇ ಕೋಟಾ.

ICC T20 World Cup: ಚುಟುಕು ಕ್ರಿಕೆಟ್ ವಿಶ್ವಕಪ್ ಆಡಿಸಲು ಆಸ್ಟ್ರೇಲಿಯಾದಿಂದ 3 ಕ್ರಿಕೆಟ್ ಪಿಚ್ ತಂದ ಅಮೆರಿಕ..!

ಟೂರ್ನಿಯ ಸ್ಕೀಟ್‌ ವಿಭಾಗದ ಫೈನಲ್‌ನಲ್ಲಿ ಮಹೇಶ್ವರಿ ಅವರು ಚಿಲಿಯ ಫ್ರಾನ್ಸಿಸ್ಕಾ ಕ್ರೊವೆಟೊ ವಿರುದ್ಧ 3-4 ಅಂತರದಲ್ಲಿ ಸೋಲನುಭವಿಸಿದರು. ಭಾರತದ ಶೂಟರ್‌ಗಳು ಒಲಿಂಪಿಕ್ಸ್‌ನ ಗರಿಷ್ಠ 24 ಕೋಟಾ ಪೈಕಿ 21 ಕೋಟಾ ಗೆದ್ದಿದ್ದಾರೆ. ಪಿಸ್ತೂಲ್‌ ಮತ್ತು ರೈಫಲ್‌ನಲ್ಲಿ ತಲಾ 8, ಶಾಟ್‌ಗನ್‌ ವಿಭಾಗದಲ್ಲಿ 5 ಕೋಟಾಗಳು ಭಾರತಕ್ಕೆ ಲಭ್ಯವಾಗಿವೆ.

ಇಂದು ಬೆಂಗಳೂರಿನಲ್ಲಿ ಇಂಡಿಯನ್‌ ಗ್ರ್ಯಾನ್‌ ಪ್ರಿ

ಬೆಂಗಳೂರು: ಇಂಡಿಯನ್‌ ಗ್ರ್ಯಾನ್‌ಪ್ರಿ-1 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಏ.30ರಂದು ನಡೆಯಲಿದೆ. ಪುರುಷ ಹಾಗೂ ಮಹಿಳೆಯರ ವಿಭಾಗಗಳಲ್ಲಿ ತಲಾ 9 ಸ್ಪರ್ಧೆಗಳು ನಡೆಯಲಿವೆ. 2 ಬಾರಿ ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಶಾಟ್‌ಪುಟ್‌ ಪಟು ತೇಜಿಂದರ್‌ ಪಾಲ್‌, ಕರ್ನಾಟಕದ ಜಾವೆಲಿನ್‌ ಎಸೆತಗಾರ ಮನು ಡಿ.ಪಿ. ಸೇರಿದಂತೆ ಪ್ರಮುಖರು ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.