ಭಾರತದ ಮೊತ್ತ ಮೊದಲ WWE ಚಾಂಪಿಯನ್ ಆಗುವತ್ತ ಕವಿತಾ ದೇವಿ!

ಭಾರತೀಯ ಉಡುಗೆ ಚೂಡಿದಾರ ತೊಟ್ಟು ರಸ್ಲಿಂಗ್ ರಿಂಗ್‌ನಲ್ಲಿ ಕಾಣಿಸಿಕೊಂಡ ಏಕೈಕ ಮಹಿಳೆ ಕವಿತಾ ದೇವಿ. ಇದೀಗ ಇದೇ ಕವಿತಾ ಭಾರತದ ಮೊತ್ತ ಮೊದಲ WWE ಚಾಂಪಿಯನ್ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ. ಇಲ್ಲಿದೆ ಕವಿತಾ ದೇವಿ ರೋಚಕ ಪಯಣದ ವಿವರ.

Wrestler Kavitha Devi set to become First Female WWE champion from India

ಹರಿಯಾಣ(ಡಿ.25): ವರ್ಲ್ಟ್ ರಸ್ಲಿಂಗ್ ಎಂಟರ್ಟೈನ್‌ಮೆಂಟ್(WWE)ನಲ್ಲಿ ದಿ ಗ್ರೇಟ್ ಖಲಿ ಎಂಟ್ರಿ ಕೊಟ್ಟ ಮೇಲೆ ಇತರ ಭಾರತೀಯರೂ ಕೂಡ ಅಂತಾರಾಷ್ಟ್ರೀಯ ರಸ್ಲಿಂಗ್‌ನಲ್ಲಿ ಮಿಂಚಬಹುದು ಅನ್ನೋ ಕಲ್ಪನೆ ಎಲ್ಲರಲ್ಲಿ ಮೂಡಿತು. ಆದರೆ ಈ ರಸ್ಲಿಂಗ್‌ನಲ್ಲಿ ಪಾಲ್ಗೊಳ್ಳಲು ಭಾರತೀಯ ಮಹಿಳೆಯರು ಹಿಂದೇಟು ಹಾಕಿದ್ದರು. ಆದರೆ 2018ರಲ್ಲಿ ಹರಿಯಾಣ ಮೂಲದ ಕವಿತಾ ದೇವಿ ಎಂಟ್ರಿ ಕೊಡೋ ಮೂಲಕ ದಾಖಲೆ ಬರೆದಿದ್ದರು.

ಇದನ್ನೂ ಓದಿ:  ಬಾಕ್ಸಿಂಗ್ ಡೇ ಟೆಸ್ಟ್’ನಲ್ಲಿ ಶತಕ ಬಾರಿಸುವೆ: ರಹಾನೆ

ಎರಡು ಮಕ್ಕಳ ತಾಯಿ, 32 ವರ್ಷದ ಕವಿತಾ ದೇವಿ ಹಲವು ಅಡೆತಡೆಗಳನ್ನ ಯಶಸ್ವಿಯಾಗಿ ಎದುರಿಸಿ ಇದೀಗ ಭಾರತದ ಮೊತ್ತ ಮೊದಲ WWE ಚಾಂಪಿಯನ್ ಆಗುವತ್ತ ಕವಿತಾ ದೇವಿ ಹೆಜ್ಜೆ ಇಟ್ಟಿದ್ದಾರೆ. 2019ರಲ್ಲಿ ನಡೆಯಲಿರುವ  ಮಹಿಳಾ ವಿಭಾಗದ  WWE ರಸ್ಲಮೇನಿಯಾದಲ್ಲಿ ಕವಿತಾ ದೇವಿ ಹೋರಾಟ ನಡೆಸಲಿದ್ದಾರೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಂತಾರಾಷ್ಟ್ರೀಯ ಹಾಕಿ ಪಟು ನಿತಿನ್ ತಿಮ್ಮಯ್ಯ!

ದಿ ಗ್ರೇಟ್ ಖಲಿ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಿ WWE ರಸ್ಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಕವಿತಾ ದೇವಿ ಆರಂಭದಲ್ಲೇ ಭಾಷೆ ತೊಡಕು ಎದುರಿಸಿದ್ದರು. ಇಂಗ್ಲೀಷ್ ಸಮಸ್ಯೆಯಿಂದ ಕೋಚಿಂಗ್ ಕ್ಲಾಸ್, ಇಂಗ್ಲೀಷ್ ಲರ್ನಿಂಗ್ ಕ್ಲಾಸ್ ಹಾಜರಾದ ಕವಿತಾ ದೇವಿ ಇಂಗ್ಲೀಷ್ ಕಲಿತಿದ್ದಾರೆ. ಹಳ್ಳಿಯಿಂದ ಅಮೇರಿಕಾದಂತೆ ದೇಶದಲ್ಲಿ ರಸ್ಲಿಂಗ್ ಆಡಲು ಬಂದ ನನ್ನ ಪಾಡು ಹೇಳತೀರದು. ಇದಕ್ಕಾಗಿ ಸಾಕಷ್ಚು ಶ್ರಮ ವಹಿಸಿದ್ದೇನೆ ಎಂದು ಕವಿತಾ ದೇವಿ ತಮ್ಮ ರಸ್ಲಿಂಗ್ ಪಯಣವನ್ನ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್’ಗೆ ಕ್ಷಣಗಣನೆ ಆರಂಭ

2018 ನನ್ನ ರಸ್ಲಿಂಗ್ ಕರಿಯರ್‌ ಹೆಚ್ಚು ಖುಷಿ ನೀಡಿದ ವರ್ಷ. ಇದೀಗ 2019ರಲ್ಲಿ ಭಾರತದ ಮೊದಲ ಚಾಂಪಿಯನ್ ಅನ್ನೋ ಪಟ್ಟ ಗಿಟ್ಟಿಸಿಕೊಳ್ಳಲು ಅಭ್ಯಾಸ ನಡೆಸಿದ್ದೇನೆ. ಉತ್ತಮ ಹೋರಾಟದ ಮೂಲಕ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಳ್ಳುತ್ತೇನೆ ಎಂದು ಕವಿತಾ ದೇವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 

Latest Videos
Follow Us:
Download App:
  • android
  • ios